News Karnataka Kannada
Friday, May 10 2024
ಕಾಸರಗೋಡು

ಕಾಸರಗೋಡು: ಮಂಜೇಶ್ವರ  ಬ್ಲಾಕ್ ಆರೋಗ್ಯ ಮೇಳ ಉದ್ಘಾಟನೆ

Manjeshwar block health fair inaugurated
Photo Credit :

ಕಾಸರಗೋಡು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರೋಗ್ಯ ಮತ್ತು ಆರೋಗ್ಯ ಸಂಬಂಧಿತ ಸೇವೆಗಳು ಮತ್ತು ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ಮಂಜೇಶ್ವರ  ಬ್ಲಾಕ್ ಆರೋಗ್ಯ ಮೇಳ ಉಪ್ಪಳ ಎಜೆಐ ಶಾಲೆಯಲ್ಲಿ ರವಿವಾರ ನಡೆಯಿತು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು.

ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶೆಮೀನಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಉಪ ಜಿಲ್ಲಾ ವೈದ್ಯಾಧಿಕಾರಿ ಇ.ಮೋಹನನ್ ಯೋಜನೆಗಳ ಕುರಿತು ವಿವರಿಸಿದರು. ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಲವೀನಾ ಜಿನ್  ಮೊಂತೇರೋ,  ಮೀ೦ಜ   ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ,  ಪೈವಳಿಕೆ  ಪಂಚಾಯತ್ ಅಧ್ಯಕ್ಷೆ ಕೆ ಜಯಂತಿ, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ, ಬ್ಲಾಕ್ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಂಸೀನಾ, ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಾ ಆರ್ ಬಲ್ಲಾಳ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ಮಂಗಲ್ಪಾಡಿ ಪಂಚಾಯತ್ .ಆರೋಗ್ಯ ಸಮಿತಿ ಅಧ್ಯಕ್ಷ ಕೆ.ಇರ್ಫಾನ, .ಸದಸ್ಯ ಬಾಬು , ಸೀಮಾ ಕುಂಚಲ್, ಡಾ.ಶಿವಾನಿ, ಅಬ್ದುಲ್ ಲತೀಫ್ ಮತ್ತಿಲ್, ರಾಜೇಶ್ ಆರ್  ಉಪಸ್ಥಿತರಿದ್ದರು . ಉಪಾಧ್ಯಕ್ಷ ಮುಹಮ್ಮದ್ ಹನೀಫ್ ಪಿ.ಕೆ ಸ್ವಾಗತಿಸಿದರು ಡಾ.ರಶ್ಮಿ  ವಂದಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಮಿಷನ್, ಸ್ಥಳೀಯ ಸ್ವ-ಸರ್ಕಾರ ಇಲಾಖೆ ಹಾಗೂ ಆಯುರ್ವೇದ ಮತ್ತು ಹೋಮಿಯೋಪತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮೇಳವನ್ನು ಆಯೋಜಿಸಲಾಗಿತ್ತು.

ಉಪ್ಪಳ ಪೇಟೆಯಿಂದ ನಯಾ ಬಜಾರ್ ವರೆಗೆ ನಡೆದ  ಮೆರವಣಿಗೆಯಲ್ಲಿ ಜನಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕುಟುಂಬ ಶ್ರೀ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಕಲಚೇತನರ ಅದಾಲತ್‌ಗಾಗಿ ವಿಶಿಷ್ಟ ಅಂಗವಿಕಲರ ಗುರುತಿನ ಚೀಟಿ ಅನೇಕ ವಿಕಲಚೇತನರು ಪ್ರಯೋಜನ ಪಡೆದಿದ್ದಾರೆ.

ಯೋಗ ತರಬೇತಿ, ಜೀವನ ಶೈಲಿ ಶಿಬಿರ, ನೇತ್ರ ತಪಾಸಣಾ ಶಿಬಿರ, ಮಾಡರ್ನ್ ಮೆಡಿಸಿನ್ ಆಯುರ್ವೇದಿಕ್ ಹೋಮಿಯೋ ವೈದ್ಯಕೀಯ ಶಿಬಿರ, ಜಾಗೃತಿ ವಿಚಾರ ಸಂಕಿರಣ ಹಾಗೂ ಔಷಧ ವಿತರಣೆಯನ್ನು ಆಯೋಜಿಸಲಾಗಿತ್ತು. ಫೇರ್ ಸ್ಟೇಷನ್ ಆಫೀಸರ್ ಕೇರಳ ಫೇರ್ ರೆಸ್ಕ್ಯೂ ಒದಗಿಸುವ ಸೇವೆಗಳನ್ನು ವಿವರಿಸಿದರು.

ಕುಟುಂಬಶ್ರೀ ಉಪಶಾಮಕ ಉತ್ಪನ್ನ ಮಾರುಕಟ್ಟೆ ಮಳಿಗೆಗಳು, ಹಲಸಿನ ಹಣ್ಣಿನಿಂದ ತಯಾರಿಸಿದ ವಿವಿಧ ಆಹಾರ ಉತ್ಪನ್ನಗಳನ್ನು ಮೇಳದಲ್ಲಿ ಆಯೋಜಿಸಲಾಗಿತ್ತು.

ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಫುಟ್ ಬಾಲ್, ಶಟಲ್, ರಸಪ್ರಶ್ನೆ, ನಾಟಕ, ಒಪ್ಪನ, ತಿರುವಾತಿರ ಮುಂತಾದ ಕಲೆ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು