News Karnataka Kannada
Monday, May 06 2024
ಕಾಸರಗೋಡು

ತ್ರಿಕೋನ ಸ್ಪರ್ಧೆಯ ಮೂಲಕ ಗಮನ ಸೆಳೆಯುತ್ತಿದೆ ಕಾಸರಗೋಡು ಲೋಕಸಭಾ ಕ್ಷೇತ್ರ

ತ್ರಿಕೋನ ಸ್ಪರ್ಧೆಯ ಮೂಲಕ ಗಮನ ಸೆಳೆಯುತ್ತಿರುವ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಸಿಪಿಐಎಂ ನಡುವೆ ನೇರ ಸ್ಪರ್ಧೆಯೂ ಈ ಬಾರಿ ಕಂಡುಬರುತ್ತಿದ್ದು, ಬಿಜೆಪಿ ಕೂಡಾ ಪೈಪೋಟಿ ನೀಡುತ್ತಿದೆ.
Photo Credit : By Author

ಕಾಸರಗೋಡು: ತ್ರಿಕೋನ ಸ್ಪರ್ಧೆಯ ಮೂಲಕ ಗಮನ ಸೆಳೆಯುತ್ತಿರುವ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಸಿಪಿಐಎಂ ನಡುವೆ ನೇರ ಸ್ಪರ್ಧೆಯೂ ಈ ಬಾರಿ ಕಂಡುಬರುತ್ತಿದ್ದು, ಬಿಜೆಪಿ ಕೂಡಾ ಪೈಪೋಟಿ ನೀಡುತ್ತಿದೆ.

೩೦ ವರ್ಷಗಳ ಬಳಿಕ ೨೦೧೯ ರಲ್ಲಿ ಕಾಂಗ್ರೆಸ್ ಈ ಕ್ಷೇತ್ರವನ್ನು ಸಿಪಿಐಎಂ ನಿಂದ ಕಸಿದುಕೊಂಡಿತ್ತು , ಕಾಂಗ್ರೆಸ್ ನ ರಾಜ್ ಮೋಹನ್ ಉಣ್ಣಿತ್ತಾನ್ ಸಿಪಿಐ ಎಂ ನ ಕೆ . ಪಿ ಸತೀಶ್ಚಂದ್ರನ್ ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿಯೂ ಕಾಂಗ್ರೆಸ್ ಗೆಲುವಿನ ಉತ್ಸಾಹದಲ್ಲಿದ್ದರೆ ಸಿಪಿಐಎಂ ಮತ್ತೆ ಕ್ಷೇತ್ರವನ್ನು ಪಡೆಯುವ ಪ್ರಯತ್ನದಲ್ಲಿದೆ. ಕಳೆದ ಬಾರಿ ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧೆ, ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಲೆ, ಶಬರಿಮಲೆ ವಿವಾದ ಚುನಾವಣಾ ಅಸ್ತ್ರವಾಗಿತ್ತು. ಈ ಬಾರಿ ರಾಜಕೀಯ ಹೋರಾಟ ಮೂಲಕ ಗಮನ ಸೆಳೆಯುತ್ತಿದೆ. ಕಾಂಗ್ರೆಸ್ ಹಾಲಿ ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್ ರವರನ್ನು ಕಣಕ್ಕಿಳಿಸಿದರೆ, ಸಿಪಿಐಎಂ ಮತ್ತು ಬಿಜೆಪಿ ಹೊಸ ಮುಖವನ್ನುಕಣಕ್ಕಿಳಿಸಿದೆ. ಸಿಪಿಐಎಂನಿಂದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ವಿ ಬಾಲಕೃಷ್ಣನ್ ಹಾಗೂ ಬಿಜೆಪಿಯಿಂದ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಎಂ. ಎಲ್ ಅಶ್ವಿನಿ ರವರನ್ನು ಕಣಕ್ಕಿಳಿಸಿದೆ.

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿನ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಸಿಪಿಐಎಂ ನೇತೃತ್ವದ ಎಲ್ ಡಿ ಎಫ್ ಮತ್ತು ಎರಡರಲ್ಲಿ ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಶಾಸಕರಿದ್ದಾರೆ. ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ ಯುಡಿಎಫ್, ಉದುಮ, ಕಾ ಞ೦ಗಾಡ್, ತೃಕ್ಕರಿಪುರ, ಪಯ್ಯನ್ನೂರು, ಕಲ್ಯಾ ಶ್ಯೇರಿಯಲ್ಲಿ ಎಲ್ ಡಿಎಫ್ ಶಾಸಕರಿದ್ದಾರೆ. ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಸಿಪಿಎಂ ಸ್ವಾಧೀನ ವಿದ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಚ್ಚರಿಯ ಮುನ್ನಡೆ ಸಾಧಿಸಿತ್ತು.

ಲೋಕಸಭಾ ಕ್ಷೇತ್ರವನ್ನು ಯುಡಿಎಫ್‌ ಅಚ್ಚರಿಯಾಗಿ ಕಸಿದುಕೊಂಡಿತ್ತು. 2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ರಾಜ್‌ಮೋಹನ್‌ ಉಣ್ಣಿತ್ತಾನ್‌ 40,438 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ರಾಜ್‌ಮೋಹನ್‌ ಉಣ್ಣಿತ್ತಾನ್‌ ಶೇ. 43 ಮತದೊಂದಿಗೆ 4, 74,961 ಮತಗಳನ್ನು ಪಡೆದುಕೊಂಡಿದ್ದರು. ಸಿಪಿಎಂನಿಂದ ಸ್ಪರ್ಧಿಸಿದ ಕೆ.ಪಿ. ಸತೀಶ್ಚಂದ್ರ ನ್ ಶೇ. 39.50 ಮತ ಗಳೊಂದಿಗೆ 434,523 ಮತಗಳನ್ನು ಪಡೆದುಕೊಂಡಿದ್ದರು.

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ರವೀಶ ತಂತ್ರಿ ಕುಂಟಾರು 1, 76,049 ಮತಗಳನ್ನು ಪಡೆದುಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಕೇರಳದಲ್ಲಿ ಯುಡಿಎಫ್‌ನ ಅಲೆ ಬೀಸಿತ್ತು. ಕೇರಳದ 20 ಸ್ಥಾನಗಳಲ್ಲಿ 19 ಯುಡಿಎಫ್‌ ಪಡೆದುಕೊಂಡಿತ್ತು. ಈ ಅಲೆಯಲ್ಲಿ ಕಾಸರಗೋಡು ಕ್ಷೇತ್ರವೂ ಯುಡಿಎಫ್‌ ಪಾಲಾಗಿತ್ತು.

ಈ ಪೈಕಿ ಬಿಜೆಪಿಯು ಅಧಿಕ ಮತಗಳನ್ನು ಸೆಳೆಯಲು ಸಾಧ್ಯವಾದರೆ ಅದು ಯುಡಿಎಫ್‌ಗೆ ಹಿನ್ನೆಡೆಯಾಗಲಿದೆ . ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರ ನಿರ್ಣಾಯಕವಾಗಲಿದೆ.

ಪೆಟ್ರೋಲ್ , ಡೀಸೆಲ್ , ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಚಾರ ವಿಷಯವಾಗಿದೆ. ಇದು ಆಡಳಿತಾರೂಢ ಪಕ್ಷಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು