ಕಾಸರಗೋಡು: ತೆಂಗಿನ ಮರದಿಂದ ಬಿದ್ದ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ರವಿವಾರ ಪೆರ್ಲ ಬೆದ್ರಂಪಳ್ಳ ಕುಕ್ಕಿಲ ಎಂಬಲ್ಲಿ ನಡೆದಿದೆ.
ಕೃಷ್ಣ ನಾಯ್ಕ(53) ಮೃತಪಟ್ಟವರು. ಆದಿತ್ಯವಾರ ಮಧ್ಯಾಹ್ನ ಮನೆ ಸಮೀಪ ದ ತೆಂಗಿನ ಮರದಿಂದ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದ ಕೃಷ್ಣ ನಾಯ್ಕರನ್ನು ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.
ಆದರೆ ಸ್ಥಿತಿ ಚಿಂತಾಜನಕ ವಾದುದರಿಂದ ಹೆಚ್ಚಿನ ಚಿಕಿತ್ಸೆಗೆ ಪರಿಯಾರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಮೃತಪಟ್ಟಿದ್ದಾರೆ.