News Karnataka Kannada
Monday, April 29 2024
ಕಾಸರಗೋಡು

ಕಾಸರಗೋಡು: ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಬೇಕಲದಲ್ಲಿ ಪ್ರವಾಸೋದ್ಯಮ ಗ್ರಾಮ!

Bekal
Photo Credit : By Author

ಕಾಸರಗೋಡು: ಬೇಕಲ ಪ್ರವಾಸೋದ್ಯಮವನ್ನು ಉತ್ತಮಪಡಿಸಲು ಪ್ರಸ್ತುತ ಇರುವ ಪ್ರವಾಸೋದ್ಯಮಗಳ ಜೊತೆಗೆ ಹೊಸ ಆಕರ್ಷಣೆಗಳು ಮತ್ತು ಆಶಯಗಳೊಂದಿಗೆ ಬೇಕಲ ಪ್ರವಾಸೋದ್ಯಮ ಗ್ರಾಮವನ್ನು ಪ್ರಾರಂಭಿಸಲಾಗುವುದು ರಾಜ್ಯ ಪ್ರವಾಸೋದ್ಯಮ ಲೋಕೋಪಯೋಗಿ ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ಹೇಳಿದರು.

ಅಜನೂರು ಪಂಚಾಯತ್ ನ 32 ಎಕರೆ ಪ್ರದೇಶದಲ್ಲಿ ಪ್ರವಾಸೋದ್ಯಮ ಗ್ರಾಮ ನಿರ್ಮಿಸಲಾಗುವುದು. ಇದಕ್ಕಾಗಿ ಈಗಾಗಲೇ ಕೆಲಸ ಕಾರ್ಯಗಳು ಪ್ರಾರಂಭವಾಗಿದೆ. ಜವಾಬ್ದಾರಿಯುತ ಪ್ರವಾಸೋದ್ಯಮದ ಮಾದರಿಯಲ್ಲಿ ಬೇಕಲಕ್ಕೆ ಹೆಚ್ಚು ಹೆಚ್ಚು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ.

ಕೃಷಿ ಪ್ರವಾಸೋದ್ಯಮ, ಫಾರ್ಮ್ ಟೂರಿಸಂ, ಸಾಹಸ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ ಮೊದಲಾದವುಗಳನ್ನೆಲ್ಲಾ ಒಂದೇ ಸ್ಥಳದಲ್ಲಿ ಅನುಭವಿಸಲು ಸಾಧ್ಯವಾಗುವುದೆಂದು ಜಿಲ್ಲೆಯ ವಿವಿಧ ಪ್ರವಾಸೋದ್ಯಮ ಯೋಜನೆಗಳನ್ನು ಪರಿಶೀಲಿಸಿದ ನಂತರ ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಚಿವರು ಹೇಳಿದರು.

ಡಿಸೆಂಬರ್‌ನಲ್ಲಿ ನಡೆಯಲಿರುವ ಬೇಕಲ್ ಅಂತರಾಷ್ಟ್ರೀಯ ಬೀಚ್ ಉತ್ಸವದ ಲೋಗೋ ಹಾಗೂ ಪ್ರೋಮೋ ವಿಡಿಯೋವನ್ನು ಪ್ರವಾಸೋದ್ಯಮ ಇಲಾಖೆ ಸಚಿವ ಪಿಎ ಮುಹಮ್ಮದ್ ರಿಯಾಝ್ ಅವರು ಬಿಡುಗಡೆ ಮಾಡಿದರು.

ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಹಾಗೂ ಪ್ರವಾಸೋದ್ಯಮ ನಿರ್ದೇಶಕ ಪಿ.ಬಿ.ನೂಹ್ ಲಾಂಛನ ಸ್ವೀಕರಿಸಿದರು. ಶಾಸಕ ಸಿ.ಎಚ್.ಕುಂಞಂಬು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಜ್ ಪಾದೂರು, ಉದುಮ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಲಕ್ಷ್ಮಿ, ಬಿಆರ್ ಡಿಸಿ ಎಂ ಡಿ ಪಿ ಶಿಜಿನ್ ಉಪಸ್ಥಿತರಿದ್ದರು

ಮಲೆನಾಡ ಹೆದ್ದಾರಿ ಕಾಮಗಾರಿಯನ್ನು ತ್ವರಿತಗೊಳಿಸಲಾಗುವುದು – ಸಚಿವ ಪಿ.ಎ.ಮಹಮ್ಮದ್ ರಿಯಾಜ್

ಜಿಲ್ಲೆಯಿಂದ ಆರಂಭವಾಗುವ 121 ಕಿ.ಮೀ ಮಲೆನಾಡು ಹೆದ್ದಾರಿಯಲ್ಲಿ 78 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಯನ್ನು ಶೀಘ್ರ ವಾಗಿ ಪೂರ್ಣಗೊಳಿಸಲು ಸಹಾಯ ಮಾಡುವುದಾಗಿ ಲೋಕೋಪಯೋಗಿ ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ತಿಳಿಸಿದರು.

ಕೃಷಿ ಕ್ಷೇತ್ರಕ್ಕೂ ಅನುಕೂಲವಾಗಲಿರುವ ಕನಸಿನ ಯೋಜನೆಯಾಗಿದೆ ಮಲೆನಾಡು ಹೆದ್ದಾರಿ. ಕೆಲವೆಡೆ ಅರಣ್ಯ ಇಲಾಖೆಗೆ ಸಂಬಂದಿಸಿದ ಸಮಸ್ಯೆಗಳಿವೆ. ಅವುಗಳನ್ನು ಅರಣ್ಯ ಸಚಿವರೊಂದಿಗೆ ಚರ್ಚಿಸಿ ಬಗೆಹರಿಸಿ, ಕಾಲ ಪರಿಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು. ಜಿಲ್ಲೆಯ ವಿವಿಧ ಲೋಕೋಪಯೋಗಿ ಕಾಮಗಾರಿಗಳನ್ನು ಸಚಿವರು ಅವಲೋಕನ ಮಾಡಿದರು.

ಹಿಂದುಳಿದ ವಿಭಾಗದ ಹಕ್ಕುಗಳ ಹೋರಾಟಕ್ಕೆ ಸರಕಾರ ಜೊತೆಗಿದೆ- ಸಚಿವ ಪಿ.ಎ.ಮಹಮ್ಮದ್ ರಿಯಾಝ್

ಕಲ್ಲು-ಮುಳ್ಳುಗಳಿಂದ ತುಂಬಿರುವ ಹಾದಿಯಲ್ಲಿ ನೀವು ಒಬ್ಬಂಟಿ ಅಲ್ಲ ಹಿಂದುಳಿದ ವರ್ಗದ ಹಕ್ಕುಗಳ ಹೋರಾಟದಲ್ಲಿ ಸರಕಾರವು ಜೊತೆಗಿದೆ ಎಂದು ಲೋಕೋಪಯೋಗಿ ಪ್ರವಾಸೋದ್ಯಮ ಯುವಜನ ಖಾತೆ ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ಹೇಳಿದರು.

ಟ್ರಾನ್ಸ್‌ಜೆಂಡರ್ಸ್ ಗಳ ಸಬಲೀಕರಣ ಯೋಜನೆಯ ಭಾಗವಾಗಿ ರೂಪೀಕರಿಸಲ್ಪಟ್ಟ ಮಾರಿವಿಲ್ ಕ್ಲಬ್ ನ ತಚ್ಚಂಗಾಡ್ ನ ಬಿ.ಆರ್.ಡಿ.ಸಿ. ಬೇಕಲ್ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಮೂರು ದಿನಗಳ ರಾಜ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಂಗಳ ಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತಲಪಿಸುವ ಉದ್ದೇಶದಿಂದ ಸಾಮಾಜಿಕ ವಾಗಿಯೂ ಆರ್ಥಿಕವಾಗಿಯೂ ಸಾಂಸ್ಕೃತಿಕವಾಗಿಯೂ ಇವರನ್ನು ಉನ್ನತ್ತೀಕರಣ ಗೊಳಿಸಿ ಸಬಲೀಕರಣ ಗೊಳಿಸುವುದು ಸರಕಾರದ ಉದ್ದೇಶವಾಗಿದೆ. ಕೇರಳ ರಾಜ್ಯ ಯುವಜನ ಕಲ್ಯಾಣ ಮಂಡಳಿ ನಡೆಸುವ ರಾಜ್ಯದ ಮೂರು ದಿನಗಳ ಶಿಬಿರ ಅವರಿಗೆ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು