ಕಾಸರಗೋಡು: ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸ್ಪೋಟಕ ವಸ್ತುಗಳ ಸಹಿತ ಓರ್ವನನ್ನು ನಾರ್ಕೋಟಿಕ್ ಸೆಲ್ ತಂಡವು ಬಂಧಿಸಿದೆ.
ಲಭಿಸಿದ ಖಚಿತ ಮಾಹಿತಿಯಂತೆ ಆದೂರು ಸಮೀಪ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಸ್ಪೋಟಕ ವಸ್ತು ಸಾಗಾಟ ಪತ್ತೆಯಾಗಿದೆ. ಈ ಸಂಬಂಧ ಕೆಟ್ಟಂಗಳ್ ನ ಮುಸ್ತಫಾ ಎಂಬಾತನನ್ನು ಬಂಧಿಸಲಾಗಿದೆ.
ಕಾರು ಮತ್ತು ಈತನ ಮನೆಯಲ್ಲಿ ತಪಾಸಣೆ ನಡೆಸಿದಾಗ ೨೮೦೦ ಜಿಲಸ್ಟಿನ್ ಸ್ಟಿಕ್, ದಿಟರ್ನೆಟರ್ ಸೇರಿದಂತೆ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳು ಪತ್ತೆಯಾಗಿದೆ.