ಕಾಸರಗೋಡು : ಬೈಕ್ ಗಳ ನಡುವೆ ಉಂಟಾದ ಅಪಘಾತ ದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ಯುವಕ ನೋರ್ವ ಮೃತಪಟ್ಟ ಘಟನೆ ನಡೆದಿದೆ.
ಅರಂತೋಡಿನ ನೌಫಲ್ (38) ಮೃತ ಪಟ್ಟ ವರು.ಏಪ್ರಿಲ್ ಒಂದರಂದು ಬದಿಯಡ್ಕ ಪೆರಡಾಲ ತಿರುವಿನಲ್ಲಿ ಅಪಘಾತ ನಡೆದಿತ್ತು.
ನೌಫಲ್ ಸಂಚರಿಸುತ್ತಿದ್ದ ಬೈಕ್ ಗೆ ಇನ್ನೊಂದು ಬೈಕ್ ಡಿಕ್ಕಿ ಹೊಡೆದು ಈ ಅಪಘಾತ ನಡೆದಿತ್ತು. ಗಂಭೀರ ಗಾಯಗೊಂಡಿದ್ದ ನೌಫಲ್ ನನ್ನು ಮಂಗಳೂರು ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ