ಕಾಸರಗೋಡು : ಏಳು ವರ್ಷದ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿ ಕಿರುಕುಳಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಸೆಷನ್ಸ್ ಹಾಗೂ ಹಾಗೂ ಹೆಚ್ಚುವರಿ ನ್ಯಾಯಾಲಯ ಏಳು ವರ್ಷ ಕಠಿಣ ಸಜೆ ಮತ್ತು 60 ಸಾವಿರ ರೂ. ದಂಡ ವಿಧಿಸಿ ತೀರ್ಫು ನೀಡಿದೆ.
ಪಡ್ರೆ ವಾಣಿನಗರದ ರಾಜೇಶ್ ನಾಯ್ಕ್ ( 42) ಶಿಕ್ಷೆಗೊಳಗಾದವನು. ಪೋಕ್ಸೋ ಕಾಯ್ದೆಯಂತೆ ಶಿಕ್ಷೆ ವಿಧಿಸಲಾಗಿದೆ
2016 ರ ಡಿಸೆಂಬರ್ 9 ರಂದು ಘಟನೆ ನಡೆದಿತ್ತು . ಬದಿಯಡ್ಕ ಠಾಣಾ ವ್ಯಾಪ್ತಿಯ ಏಳು ವರ್ಷದ ಬಾಲಕಿಯ ಕಿರುಕುಳಕ್ಕೆ ಯತ್ನಿಸಲಾಗಿತ್ತು.
ರಾಜೇಶ್ ನಾಯ್ಕ್ ಬಾಲಕಿಗೆ ಆಮಿಷ ತೋರಿಸಿ ಕರೆದು ಕೊಂಡು ಹೋಗಿ ಅಶ್ಲೀಲ ವಿಡಿಯೋ ತೋರಿಸಿ ಕಿರುಕುಳಕ್ಕೆ ಯತ್ನಿಸಿರುವುದಾಗಿ ದೂರು ದಾಖಲಿಸಲಾಗಿತ್ತು.