ಕಾಸರಗೋಡು : ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇರಳದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ನಾಳೆ ( 29) ಯಿಂದ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದ್ದು , ಪೊಲೀಸ್ ತಪಾಸಣೆ ಆರಂಭಗೊಳ್ಳಲಿದೆ.
ಆದೇಶ ಉಲ್ಲಂಘಿಸಿದ್ದಲ್ಲಿ ೫೦೦ ರೂ . ದಂಡ ವಸೂಲು ಮಾಡಲಾಗುವುದು. ದೇಶದ ಹಲವು ಕಡೆಗಳಲ್ಲಿ ಸೋಂಕು ಮತ್ತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರಕಾರ ಹೊಸ ಮಾರ್ಗ ಸೂಚಿ ಹೊರಡಿಸಿದೆ.