News Karnataka Kannada
Sunday, April 28 2024
ಕಾಸರಗೋಡು

ಕಾಳಸಂತೆ ಹಾಗೂ ಅಕ್ರಮ ದಾಸ್ತಾನು ತಡೆಗೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್  

Inauguration of administrative office of Federation of Bunts Associations at Mulki on April 5
Photo Credit :

ಕಾಸರಗೋಡು: ಜಿಲ್ಲೆಯಲ್ಲಿ  ಕಾಳಸಂತೆ ಹಾಗೂ ಅಕ್ರಮ ದಾಸ್ತಾನು ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್  ತಿಳಿಸಿದ್ದಾರೆ.  ಗುರುವಾರ ನಡೆದ ಸಂಬಂಧ ಪಟ್ಟ  ಇಲಾಖಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಬೆಲೆ ಏರಿಕೆ ತಡೆಗಟ್ಟಲು  ತಪಾಸಣೆಗೆ ನಿಗಾ ಇರಿಸಲಾಗುವುದು.

ರಖಂ ವರ್ತಕರು ಜಯ ಅಕ್ಕಿಯನ್ನು ದಾಸ್ತಾನಿಡುತ್ತಿದ್ದಾರೆ  ಎಂಬ ದೂರು ರಾಜ್ಯಮಟ್ಟದಲ್ಲೇ ಕೇಳಿಬರುತ್ತಿದ್ದು ,  ಈ ಹಿನ್ನಲೆಯಲ್ಲಿ ತಪಾಸಣೆ ನಡೆಸಲು  ವಿಶೇಷ ತಂಡ ರಚಿಸಲು  ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿ ಕೆ . ಎನ್  ಬಿಂದು ರವರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು.

ನಾಗರಿಕ ಪೂರೈಕೆ , ಪೊಲೀಸ್ , ಲೀಗಲ್ ಮೆಟ್ರೋಲಜಿ  ಇಲಾಖೆಯ ಅಧಿಕಾರಿಗಳು ವಿವಿಧ ಕೇಂದ್ರಗಳಲ್ಲಿ ತಪಾಸಣೆ ನಡೆಸುವರು. ಆಹಾರಸಾಮಗ್ರಿಗಳಿಗೆ ದುಬಾರಿ ಬೆಲೆ ವಸೂಲು ಮಾಡುವುದು ಕಂಡುಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮುನ್ನೆಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಎ . ಕೆ ರಮೇ೦ದ್ರನ್ , ತಹಶೀಲ್ದಾರ್ ಹಾಗೂ  ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು