News Karnataka Kannada
Tuesday, April 30 2024
ಕಾಸರಗೋಡು

ಕರ್ನಾಟಕ-ಕೇರಳ ಗಡಿ ಸಂಚಾರ ನಿರ್ಬಂಧ ಖಂಡಿಸಿ ವಿರೋಧ ಪಕ್ಷಗಳ ಸತ್ಯಾಗ್ರಹ

New Project 2021 08 15t104331.072
Photo Credit :

ಮಂಜೇಶ್ವರ : ಕೇರಳ – ಕರ್ನಾಟಕ ಗಡಿಯಲ್ಲಿ ಕರ್ನಾಟಕ ಸರಕಾರ ನಿರ್ಬಂಧ ವಿಧಿಸಿ ಸಾರ್ವಜನಿಕರ ಸಂಚಾರ ಸ್ವಾತಂತ್ರ‍್ಯ ಕಸಿಯುವ ಯತ್ನವನ್ನು ಖಂಡಿಸಿ ಮOಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಸ್ವಾತಂತ್ರ‍್ಯ ದಿನಾಚರಣೆಯಂದು ನಿರಾಹಾರ ಸತ್ಯಾಗ್ರಹ ನಡೆಸಿದರು .’ಒಂದೇ ಭಾರತ ಒಂದೇ ಜನತೆ ‘ ಎಂಬ ಸಂದೇಶದೊOದಿಗೆ ತಲಪಾಡಿ ಗಡಿಯಲ್ಲಿ ನಡೆದ ಸತ್ಯಾಗ್ರಹವನ್ನು ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್ ಉದ್ಘಾಟಿಸಿದರು.

ಕೋವಿಡ್ ಹೆಸರಲ್ಲಿ ಅಂತಾರಾಜ್ಯ ಸಂಚಾರ ನಿರ್ಬಂಧ ಗೊಳಿಸುವ ಕರ್ನಾಟಕರ ಸರಕಾರದ ನಿಲುವು ಜನರ ಸಂಚಾರ ಸ್ವಾತಂತ್ರ‍್ಯವನ್ನು ಕಸಿಯುವಂತಹದ್ದಾಗಿದ್ದು , ಕೂಡಲೇ ನಿರ್ಬಂಧವನ್ನು ಹಿಂಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಸತ್ಯಾಗ್ರಹಕ್ಕೆ ವಿವಿಧ ರಾಜಕೀಯ ಪಕ್ಷದ , ಧಾರ್ಮಿಕ , ಸಾಮಾಜಿಕ ಮುಖಂಡರು , ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯುಡಿಎಫ್ ಮಂಜೇಶ್ವರ ಕ್ಷೇತ್ರ ಸಮಿತಿ ಅಧ್ಯಕ್ಷ ಟಿ.ಎ.ಮೂಸಾ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು .ಸಂಚಾಲಕ ಮಂಜುನಾಥ ಆಳ್ವ, ಅಜೀಜ್ ಮರಿಕೆ , ಸುಂದರ ಆರಿಕ್ಕಾಡಿ , ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ರಹಮಾನ್ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿಎಂಕೆ ಮುಹಮ್ಮದ್ ಮತ್ತಿತರರು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು