ಮಂಗಳೂರು: ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗ ವತಿಯಿಂದ ಆರಕ್ಷರ ಕನ್ನಡೋತ್ಸವ ಪುರಭವನದಲ್ಲಿ ನ.1ರಂದು ಸಾಯಂಕಾಲ 5.30ರಿಂದ ನಡೆಯಲಿದೆ. ನಗರ ಪೊಲೀಸ್ ಆಯುಕ್ತ ಅನುಪಮ್ ಆಗರವಾಲ್ ಕಾರ್ಯಕ್ರಮ ಉದ್ಘಾಟನೆ ಮಾಡುವರು.
ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಿರ್ಮಾಪಕ ವಿಜಯಕುಮಾರ್ ಕೊಡಿಯಾಲ್ಬೈಲ್ ನಟ ಅರವಿಂದ ಬೋಳಾರ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಪಾಲ್ಗೊಳ್ಳುವರು.
ಸಾಧಕರಿಗೆ ಸನ್ಮಾನ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕುಮಾರ್, ಬರಹಗಾರ ಶಾಂತಪ್ಪ ಬಾಬು, ಉದಯೋನ್ಮುಖ ಕವಿ ಮೂಗಪ್ಪ ಗಾಳೇರ, ರೂಪದರ್ಶಿ ಇಶಿಕಾ ಶರತ್ ಶೆಟ್ಟಿ, ನಾಟಕ ಬರಹಗಾರ ಹರೀಶ್ ಕುಮಾರ್ ಅವರನ್ನು ಸನ್ಮಾನಿಸಲಾಗುವುದು. ಖ್ಯಾತ ಕಲಾವಿದರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಉಪಪೊಲೀಸ್ ಆಯುಕ್ತ ಸಿದ್ದಾರ್ಥ್ ಗೋಯಲ್, (ಕಾನೂನು ಸುವ್ಯವಸ್ಥೆ), ಉಪಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ದಿನೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.