ಕಾಸರಗೋಡು: 500 ಬಾಟ್ಲಿ ವಿದೇಶಿ ಮದ್ಯ ಸಹಿತ ಓರ್ವನನ್ನು ಕಾಸರಗೋಡು ಅಬಕಾರಿ ದಳದ ಸಿಬಂದಿಗಳು ಬಂಧಿಸಿದ್ದಾರೆ.
ಬಂಧಿತನನ್ನು ತಳಂಗರೆ ಕೊಪ್ಪಲ್ ಕಾಲನಿಯ ರಮೇಶ್ ( 39) ಎಂದು ಗುರುತಿಸಲಾಗಿದೆ. ರಮೇಶ್ ನ ಮನೆಯ ಅಡುಗೆ ಕೋಣೆಯ ನೆಲದಡಿ ನಾಲ್ಕು ಪ್ಲಾಸ್ಟಿಕ್ ಗೋಣಿ ಮತ್ತು ಚೀಲಗಳಲ್ಲಿ ಬಚ್ಚಿಡಲಾಗಿತ್ತು. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ತಳಂಗರೆ , ಕಾಸರಗೋಡು ಪೇಟೆ, ಕರಂದಕ್ಕಾಡ್ , ಕೇಳುಗುಡ್ಡೆ ಮೊದಲಾದ ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ಹಲವೆಡೆ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಅಬಕಾರಿ ದಳಕ್ಕೆ ಮಾಹಿತಿ ಲಭಿಸಿದ್ದು, ಮುಂದಿನ ದಿನಗಳಲ್ಲೂ ವಿಶೇಷ ನಿಗಾ ಇಡಲು ಅಬಕಾರಿ ದಳದ ಸಿಬಂದಿಗಳು ಮುಂದಾಗಿದ್ದಾರೆ.