News Karnataka Kannada
Thursday, May 02 2024
ಕರಾವಳಿ

ದೇವರ ವಿಚಾರವನ್ನು ದೇವರೇ ನೋಡಿಕೊಳ್ಳಲಿ: ಸಚಿವೆ ಜಯಮಾಲಾ

Photo Credit :

ದೇವರ ವಿಚಾರವನ್ನು ದೇವರೇ ನೋಡಿಕೊಳ್ಳಲಿ: ಸಚಿವೆ ಜಯಮಾಲಾ

ಉಡುಪಿ: ಶಬರಿಮಲೆ ಮಹಿಳೆಯರ ಪ್ರವೇಶದ ವಿಚಾರವನ್ನು ದೇವರೇ ನೋಡಿಕೊಳ್ಳಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಎಲ್ಲರೂ ಆತ್ಮಮುಟ್ಟಿಕೊಂಡು ವಿಚಾರ ಮಾಡಲಿ. ಈ ದೇಶ ಎಲ್ಲವನ್ನೂ ಗಮನಿಸುತ್ತಿದೆ. ಅರ್ಧ ಆಕಾಶ, ಅರ್ಧ ಭೂಮಿ ಇದ್ದಂತೆ. ದೇಶದಲ್ಲಿ ಅರ್ಧದಷ್ಟು ಹೆಣ್ಣುಮಕ್ಕಳಿದ್ದಾರೆ. ದೇವರು ನನಗೆ ನಂಬಿಕೆ ಮತ್ತು ನನ್ನ ಬದುಕು. ದೇವರನ್ನೇ ಟಾರ್ಗೆಟ್ ಮಾಡುವವರ ಬಗ್ಗೆ ನಾನೂ ಏನೂ ಹೇಳಲ್ಲ. ನಮಗೆ ಜೀವನದ ಗೆರೆ ಹಾಕಿಕೊಟ್ಟದ್ದು ದೇವರ ನಂಬಿಕೆ. ಹೀಗಾಗಿ ದೇವಸ್ಥಾನವೇ ನನ್ನ ಉಸಿರು. ಅಲ್ಲದೇ ಶಬರಿಮಲೆ ವಿಚಾರದ ಪರ ಹಾಗೂ ವಿರೋಧದ ಬಗ್ಗೆ ಏನನ್ನೂ ಹೇಳಲ್ಲ. ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ. ಕೊನೆಗೆ ದೇವರೆ ಒಂದು ತೀರ್ಮಾನಕ್ಕೆ ಬರುತ್ತಾನೆಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಸಿಎಂ ಕುಮಾರಸ್ವಾಮಿ ಹೇಳಿಕೆಯ ಪರ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮಾತನಾಡಿರುವುದನ್ನು ನಾನು ಕೇಳಿದ್ದೇನೆ. ಅವರ ಮಾತಿನ ಅರ್ಥ, ಭಾವನೆ ಮಹಿಳೆಯ ವಿರುದ್ಧ ಇರಲಿಲ್ಲ. ಅವರು ಹೋರಾಟ ಮಾಡಿದ ರೈತ ಮಹಿಳೆಗೆ ಅವಮಾನ ಮಾಡಿಲ್ಲ. ಆದರೆ ಎಲ್ಲರೂ ಅವರವರ ಭಾವಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ. ಹೆಣ್ಣುಮಕ್ಕಳನ್ನು ತಾಯಿ ಎಂದೇ ಗೌರವದಿಂದ ಕರೆದಿದ್ದಾರೆಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
192
Shreyas Vittal

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು