News Karnataka Kannada
Saturday, May 04 2024
ಕರಾವಳಿ

ಕುಡಿಯುವ ನೀರಿಗೆ ಕಲುಷಿತ ನೀರು: ಮಂಗಳೂರು ಪಾಲಿಕೆಗೆ ಹೈಕೋರ್ಟ್‌ ಛೀಮಾರಿ

High Court
Photo Credit :

ಮಂಗಳೂರು: ನಗರದಲ್ಲಿ ಕುಡಿಯುವ ನೀರಿಗೆ ಕಲುಷಿತ ನೀರು ಸೇರ್ಪಡೆ ಆಗುತ್ತಿರುವುದನ್ನು ತಡೆಯದ ಪಾಲಿಕೆಗೆ ಛೀಮಾರಿ ಹಾಕಿರುವ ಹೈಕೋರ್ಟ್‌, ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿದೆ.

ತ್ಯಾಜ್ಯ ಶುದ್ಧೀಕರಣ ಘಟಕದಿಂದ ಫಲ್ಗುಣಿ ನದಿಗೆ ಕಲುಷಿತ ನೀರು ಹರಿ ಬಿಡಲಾಗುತ್ತಿದೆ ಎಂಬುದನ್ನು ಕೆಎಸ್‌ಪಿಸಿಬಿ ವರದಿ ಬಹಿರಂಗಪಡಿಸಿದೆ. ತಡೆಯುವಲ್ಲಿ ಪಾಲಿಕೆ ಕಣ್ಮುಚ್ಚಿ ಕುಳಿತಿದೆ. ಮಂಗಳೂರಿನ ನಿವಾಸಿಗಳಿಗೆ ಪಾಲಿಕೆ ಕಲುಷಿತ ನೀರು ಕುಡಿಸುತ್ತಿದ್ದರೆ ನ್ಯಾಯಾಲಯ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಮಳವೂರು ನೀರು ಸಂಸ್ಕರಣಾ ಘಟಕದಲ್ಲಿ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ‘ಮುಗ್ರೊಡಿ ಕನ್‌ಸ್ಟ್ರಕ್ಷನ್‌’ ಎಂಬ ಸಂಸ್ಥೆ ಸಲ್ಲಿಸಿದ ಪರೀಕ್ಷಾ ವರದಿಯನ್ನು ಸರ್ಕಾರ ಸಲ್ಲಿಸಿತು. 40 ವರ್ಷದಷ್ಟು ಹಳೆಯದಾದ ಪಚ್ಚನಾಡಿ ಘಟಕವನ್ನು ಹಂತ–ಹಂತವಾಗಿ ಸ್ಥಳಾಂತರ ಮಾಡಬೇಕಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು.

‘ನೀರಿನ ಗುಣಮಟ್ಟ ಪರೀಕ್ಷೆಗೆ ‌ಯಾವ ಕಾನೂನಿನ ಅಡಿಯಲ್ಲಿ ಖಾಸಗಿ ಸಂಸ್ಥೆಯನ್ನು ನೇಮಕ ಮಾಡಲಾಯಿತು ಎಂಬುದು ಅರ್ಥವಾಗದ ಸಂಗತಿ’ ಎಂದು ಛೀಮಾರಿ ಹಾಕಿದ ಪೀಠ, ವರದಿ ತಿರಸ್ಕರಿಸಿತು.‌

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು