News Karnataka Kannada
Friday, May 17 2024
ಕರಾವಳಿ

ಕರೋಪಾಡಿ ಗ್ರಾಮಪಂಚಾಯತ್ ಉಪಚುನಾವಣೆ: ಜಲೀಲ್ ಕರೋಪಾಡಿ ಸಹೋದರನಿಗೆ ಜಯ

Photo Credit :

ಕರೋಪಾಡಿ ಗ್ರಾಮಪಂಚಾಯತ್ ಉಪಚುನಾವಣೆ: ಜಲೀಲ್ ಕರೋಪಾಡಿ ಸಹೋದರನಿಗೆ ಜಯ

ಬಂಟ್ವಾಳ; ಕರೋಪಾಡಿ ಗ್ರಾಮಪಂಚಾಯತ್ ಗೆ ಕಳೆದ ಭಾನುವಾರ ನಡೆದಿದ್ದ ಉಪಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ, ಜಲೀಲ್ ಕರೋಪಾಡಿ ಸಹೋದರ ಎ.ಮಹಮ್ಮದ್ ಅನ್ವರ್ ಕರೋಪಾಡಿ 449 ಮತಗಳನ್ನು ಗಳಿಸುವ ಮೂಲಕ ವಿಜಯದಾಖಲಿಸಿದ್ದಾರೆ.

ಇವರ ವಿರುದ್ದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹರೀಶ್ 320 ಮತಗಳನ್ನು ಗಳಿಸಿದ್ದು, 21 ಮತಗಳು ತಿರಸ್ಕೃತಗೊಂಡಿದೆ. ಮತದಾನ ಕೇಂದ್ರದಲ್ಲಿ 517 ಪುರುಷ ಮತದಾರರ ಪೈಕಿ 400 ಹಾಗೂ 462 ಮಹಿಳಾ ಮತದಾರರ ಪೈಕಿ 390 ಮಂದಿ ಮತಚಲಾಯಿಸಿದ್ದರು.

ಗ್ರಾಮಪಂಚಾಯತ್ ಉಪಾಧ್ಯಕ್ಷರಾಗಿದ್ದ ಜಲೀಲ್ ಕರೋಪಾಡಿಯವರ ಹತ್ಯೆ ಕಳೆದ ಏ.20 ರಂದು ನಡೆದಿತ್ತು. ಹತ್ಯೆ ಬಳಿಕ ಅವರ ಸ್ಥಾನ ತೆರವಾಗಿದ್ದು, ಸಹೋದರ ಅನ್ವರ್ ಕರೋಪಾಡಿ ಸ್ಪರ್ಧಿಸಿದ್ದರು. ಕರೋಪಾಡಿ ಗ್ರಾಮ ಪಂಚಾಯತ್ ನ ಕರೋಪಾಡಿ -4 ಚುನಾವಣಾ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಜಲೀಲ್ ಕರೋಪಾಡಿ ತನ್ನ ಪ್ರತಿಸ್ಪಧರ್ಿಎದುರು 27 ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಬಾರಿ ಸಹೋದರ ಅನ್ವರ್ 129 ಮತಗಳ ಅಂತರದ ಜಯಸಾಧಿಸಿದ್ದಾರೆ.

ತಹಶೀಲ್ದಾರ್ ಪುರಂದರ ಹೆಗ್ಡೆ ಮಾರ್ಗದರ್ಶನದಲ್ಲಿ ಉಪತಹಶೀಲ್ದಾರ್ ಪರಮೇಶ್ವರ ನಾಯ್ಕ್ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯಿತು. ಚುನಾವಣಾಧಿಕಾರಿ ಸುಧಾ ಜೋಷಿ ವಿಜೇತ ಅಭ್ಯರ್ಥಿಗೆ ಪ್ರಮಾಣಪತ್ರ ವಿತರಿಸಿದರು. ಈ ಸಂದರ್ಭ ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ ಸಹಿತ ಪ್ರಮುಖರು ಉಪಸ್ಥಿತರಿದ್ದರು. ವಿಟ್ಲ ಎಸ್.ಐ. ನಾಗರಾಜ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು