ಉಡುಪಿ: ಉಪ ಚುನಾವಣಾ ಫಲಿತಾಂಶದ ಹಿನ್ನೆಲೆ ವಿಧಾನ ಪರಿಷತ್ ವಿಪಕ್ಷ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. ಶಿವಮೊಗ್ಗ,ಬಳ್ಳಾರಿ, ಜಮ್ಮಖಂಡಿ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ನಿರೀಕ್ಷೆಯನ್ನು ಮೀರಿ ಕಾಂಗ್ರೆಸ್- ಜೆಡಿಎಸ್ ಗೆಲುವು ಸಾಧಿಸಿದೆ.
ಬಳ್ಳಾರಿಯಲ್ಲಿ ಡಿಕೆಶಿ ನೇತೃತ್ವದಲ್ಲಿ ಹಣದ ಹೊಳೆ ಹರಿಸಿದ್ದಾರೆ. ಹಣದ ದಂಧೆಯನ್ನು ತಡೆಯದಿದ್ದರೆ ಏರುಪೇರಾಗುತ್ತೆ ಅನ್ನೋ ಆತಂಕ ಇತ್ತು. ಆಳುವ ಪಕ್ಷ ತನ್ನೆಲ್ಲಾ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಕೋಟ ದೂರಿದರು.
ಗೆಲುವು ಸಂತೋಷ ನೀಡಿದೆ. ನಮ್ಮ ಪಕ್ಷಕ್ಕೆ ಆತ್ಮಾವಲೋಕನ ಮಾಡಲು ಸಕಾಲ. ತಳಮಟ್ಟದಿಂದಲೇ ಪಕ್ಷವನ್ನು ಗಟ್ಟಿಗೊಳಿಸಬೇಕಾಗಿದೆ. ಬಿಜೆಪಿ ಮುಂದಿನ ಪಾರ್ಲಿಮೆಂಟ್ ಚುನಾವಣೆ ಯಲ್ಲಿ ಹೆಚ್ವು ಸ್ಥಾನ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .