News Karnataka Kannada
Saturday, May 04 2024
ರಾಯಚೂರು

ಪಿಕಪ್ ವಾಹನ ಹರಿದು ಮೂವರು ಹನುಮ ಭಕ್ತರ ಸಾವು

ಮನೆಗೆ ಬಂದಿದ್ದ ಪಾರ್ಸೆಲ್ ಸ್ಫೋಟಗೊಂಡು ತಂದೆ ಹಾಗೂ ಮಗಳು ಸಾವನ್ನಪ್ಪಿದ್ದ ಘಟನೆ ಗುಜರಾತ್‍ನ ವಡಾಲಿಯಲ್ಲಿ ಗುರುವಾರ ನಡೆದಿದೆ.
Photo Credit : NewsKarnataka

ರಾಯಚೂರು: ಹನುಮ ಭಕ್ತರ ಮೇಲೆ ಪಿಕಪ್ ವಾಹನ ಹರಿದು ಮೂವರು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಗ್ಗಸನಹಳ್ಳಿಯಲ್ಲಿ ನಡೆದಿದೆ.

ಅಯ್ಯನಗೌಡ (30), ಮಹೇಶ (30), ಉದಯಕುಮಾರ (30) ಸಾವನ್ನಪ್ಪಿದ ಹನುಮ ಭಕ್ತರು.  ಇವರು ಶಕ್ತಿನಗರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಮತ್ತಿಬ್ಬರಿಗೂ ಗಾಯಗಳಾಗಿದ್ದು ರಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆಗ್ಗಸನಹಳ್ಳಿ ಸಮೀಪದ ಎಂಪಿಸಿಎಲ್ ಕಾಲೋನಿಯ 8-10 ಭಕ್ತರು ನದಿ ನೀರಲು ತರಲು ಪಾದಯಾತ್ರೆ ಮಾಡುತ್ತಿದ್ದರು. ಹಿಂದಿನಿಂದ ಬಂದ ಪಿಕಪ್ ವಾಹನ ಭಕ್ತರ ಮೇಲೆ ಹರಿದಿದೆ.

ತೆಲಂಗಾಣ ಮೂಲದ ಜಡಚರ್ಲಾದ ವಾಹನ ಅಪಘಾತ ಮಾಡಿದೆ. ಅಪಘಾತ ಬಳಿಕ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದ, ಕೊನೆಗೆ ಪೊಲೀಸರು ಬೆನ್ನತ್ತಿ ಹಿಡಿದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು