News Karnataka Kannada
Monday, May 06 2024
ರಾಯಚೂರು

ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ : 4 ಘಟಕಗಳು ಬಂದ್

ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಎಂಟು ಘಟಕಗಳಲ್ಲಿ ನಾಲ್ಕು ಘಟಕಗಳು ಬಂದ್ ಆಗಿವೆ. ಎರಡು ಘಟಕಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಒಟ್ಟು 1720 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿರೊ ಆರ್​ಟಿಪಿಎಸ್​ನಲ್ಲಿ ನಾಲ್ಕು ಘಟಕ ಬಂದ್ ಆಗಿದ್ದರಿಂದ 903 ಮೆ.ವ್ಯಾ.ವಿದ್ಯುತ್ ಉತ್ಪಾದನೆ ಮಾಡಲಾಗಿದೆ
Photo Credit : NewsKarnataka

ರಾಯಚೂರು:  ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಎಂಟು ಘಟಕಗಳಲ್ಲಿ ನಾಲ್ಕು ಘಟಕಗಳು ಬಂದ್ ಆಗಿವೆ. ಎರಡು ಘಟಕಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಒಟ್ಟು 1720 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿರೊ ಆರ್​ಟಿಪಿಎಸ್​ನಲ್ಲಿ ನಾಲ್ಕು ಘಟಕ ಬಂದ್ ಆಗಿದ್ದರಿಂದ 903 ಮೆ.ವ್ಯಾ.ವಿದ್ಯುತ್ ಉತ್ಪಾದನೆ ಮಾಡಲಾಗಿದೆ.

ತಾಲೂಕಿನ ಶಕ್ತಿನಗರದಲ್ಲಿರುವ ಆರ್​ಟಿಪಿಎಸ್ ಘಟಕದಲ್ಲಿ 8 ಘಟಕಗಳಲ್ಲಿ 4 ಘಟಕ ಬಂದ್ ಆಗಿವೆ. ಎರಡು ಘಟಕಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ರಾಜ್ಯಕ್ಕೆ ಸುಮಾರು‌ 40% ವಿದ್ಯುತ್ ಪೂರೈಕೆ ಮಾಡುವ ಆರ್​ಟಿಪಿಎಸ್​ನಲ್ಲಿ​ ಕಳೆದ ಎರಡು ದಿನಗಳಿಂದ ಬಾಯ್ಲರ್ ಟ್ಯೂಬ್ ಲೀಕೇಜ್ ಹಾಗೂ ಬಂಕ್ಲರ್ ಸಮಸ್ಯೆಯಿಂದ 1,2,3 ಮತ್ತು 6 ಸೇರಿ ಒಟ್ಟು ನಾಲ್ಕು ಘಟಕಗಳು ಬಂದ್ ಆಗಿವೆ.

2 & 6ನೇ ಘಟಕಗಳ ದುರಸ್ತಿ ಕಾರ್ಯ ನಡೆಸುತ್ತಿದ್ದು ಸದ್ಯ‌ 1&3 ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಇದರಿಂದಾಗಿ ರಾಜ್ಯದಲ್ಲಿ ಮುಂದಿನ ಕೆಲ ದಿನಗಳ ಕಾಲ ವಿದ್ಯುತ್ ಸಮಸ್ಯೆ ಎದುರಾಗುವ ಭೀತಿ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು