News Karnataka Kannada
Monday, April 29 2024
ಕೊಪ್ಪಳ

ಅಂಬೇಡ್ಕರ್ ಪ್ರತಿಮೆ, ಭಾವಚಿತ್ರಕ್ಕೆ ಟೊಮ್ಯಾಟೋ ಸಾಸ್ ಎರಚಿದ ಕಿಡಿಗೇಡಿಗಳು

ಸಂವಿಧಾನಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಪ್ರತಿಮೆ, ಭಾವಚಿತ್ರಕ್ಕೆ ತಡರಾತ್ರಿ ಕಿಡಿಗೇಡಿಗಳು ಟೊಮ್ಯಾಟೋ ಸಾಸ್ ಎರಚಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಕೋರ್ಟ್ ಎದುರುಗಡೆ ಇರುವ ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆದಿದೆ.
Photo Credit : News Kannada

ಕೊಪ್ಪಳ: ಸಂವಿಧಾನಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಪ್ರತಿಮೆ, ಭಾವಚಿತ್ರಕ್ಕೆ ತಡರಾತ್ರಿ ಕಿಡಿಗೇಡಿಗಳು ಟೊಮ್ಯಾಟೋ ಸಾಸ್ ಎರಚಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಕೋರ್ಟ್ ಎದುರುಗಡೆ ಇರುವ ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆದಿದೆ.

ಘಟನೆ ಖಂಡಿಸಿ ದಲಿತ ಸಂಘಟನೆಗಳಿಂದ ದಿಢೀರ್ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಘಟನೆ ಬಳಿಕ ಜನರು ಜಮಾವಣೆ ಆಗುತ್ತಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ,ತಹಸೀಲ್ದಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲಿಸಿ ಶಾಸಕ ಜನಾರ್ದನರೆಡ್ಡಿ ಸಹ ಆಗಮಿಸಿದ್ದಾರೆ.

ಅಂಬೇಡ್ಕರ್ ಭಾವಚಿತ್ರ, ಪ್ರತಿಮೆ ಅವಮಾನ ಮಾಡಿದ ಕಿಡಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಸ್ಥಳದಲ್ಲಿದ್ದ ಬಿಗುವಿನ ವಾತಾವರಣವನ್ನು ಅಧಿಕಾರಿಗಳು ತಿಳಿಗೊಳಿಸಿದರು. ಬಳಿಕ ನಗರ ಸಭೆ ಸಿಬ್ಬಂದಿಯಿಂದ ಅಂಬೇಡ್ಕರ್ ಮೂರ್ತಿ ಶುದ್ಧಗೊಳಿಸಲಾಯಿತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು