ಗಂಗಾವತಿ: ಇಂಗ್ಲೆಂಡಿನ ರಾಯಭಾರಿ ಅಲೆನ್ ಗೆಮ್ಮೆಲ್ ದಂಪತಿ ತಾಲ್ಲೂಕಿನ ಧಾರ್ಮಿಕ ಪುಣ್ಯಕ್ಷೇತ್ರ ಅಂಜನಾದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ ಶನಿವಾರ ದರ್ಶನ ಪಡೆದರು.
ಮುಂಬೈನಲ್ಲಿ ಬ್ರಿಟನ್ ಸರ್ಕಾರದ ಡೆಪ್ಯುಟಿ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಗೆಮ್ಮೆಲ್ ಹುಬ್ಬಳಿ ಸಮೀಪದ ರಾಷ್ಟ್ರಧ್ವಜ ತಯಾರಿಸುವ ಗರಗದ ಘಟಕಕ್ಕೆ ಹಾಗೂ ಜಿಂದಾಲ್, ಹೊಸಪೇಟೆ ಭಾಗದಲ್ಲಿನ ಮಹಿಳಾ ಸ್ವಸಹಾಯ ಸಂಘ, ಸಹಕಾರ ಸಂಘಗಳ ಕಾರ್ಯಚಟುವಟಿಕೆ ಕುರಿತು ಅಧ್ಯಯನ ಮಾಡಲು ಬಂದಿರುವುದಾಗಿ ತಿಳಿಸಿದರು.
ಅಲೆನ್ ಗೆಮ್ಮೆಲ್ ದಂಪತಿಯನ್ನು ಹರಿ ಎಂಬುವವರು ಅಂಜನಾದ್ರಿ ದೇವಸ್ಥಾನಕ್ಕೆ ಕರೆತಂದು ದರ್ಶನ ಮಾಡಿಸಿದ್ದಾರೆ.