News Karnataka Kannada
Saturday, April 27 2024
ಕಲಬುರಗಿ

ಶಾಲಾ ಮಕ್ಕಳಿಂದ ಮನೆಗೆಲಸ, ಶೌಚಾಲಯ ಸ್ವಚ್ಛತೆ

ನಗರದ ಮಾಲಗತ್ತಿ ರಸ್ತೆಯಲ್ಲಿರುವ ಮೌಲಾನಾ ಅಬ್ದುಲ್ ಆಂಗ್ಲ ಮಾಧ್ಯಮ ಶಾಲಾ‌ ಮಕ್ಕಳಿಂದ ಶೌಚಾಲಯ ಮತ್ತು ಮುಖ್ಯ ಶಿಕ್ಷಕಿ ಮನೆಗೆಲಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಾಲಾ ಮಕ್ಕಳು ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Photo Credit : News Kannada

ಕಲಬುರಗಿ: ನಗರದ ಮಾಲಗತ್ತಿ ರಸ್ತೆಯಲ್ಲಿರುವ ಮೌಲಾನಾ ಅಬ್ದುಲ್ ಆಂಗ್ಲ ಮಾಧ್ಯಮ ಶಾಲಾ‌ ಮಕ್ಕಳಿಂದ ಶೌಚಾಲಯ ಮತ್ತು ಮುಖ್ಯ ಶಿಕ್ಷಕಿ ಮನೆಗೆಲಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಾಲಾ ಮಕ್ಕಳು ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಮೆಂಟ್​, ಮರಳನ್ನು ಮಿಕ್ಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಕಳೆದೊಂದು ವರ್ಷದಿಂದ ವಿದ್ಯಾರ್ಥಿಗಳನ್ನ ಮನೆಗೆಲಸಕ್ಕೆ ಮತ್ತು ಶಾಲೆ ಶೌಚಾಲಯ ಸ್ವಚ್ಛತೆಗೆ ಮುಖ್ಯ ಶಿಕ್ಷಕಿ ಬಳಸಿಕೊಂಡಿದ್ದಾರೆ. ಈ‌ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಶಾಲೆಯ ಮುಖ್ಯಶಿಕ್ಷಕಿ ಜೋಹರ ಜಬೀನ್, ವಿದ್ಯಾರ್ಥಿಗಳನ್ನ ವಾರಕ್ಕೊಮ್ಮೆ ಶಾಲೆಯ ಶೌಚಾಲಯ ಸ್ವಚ್ಛ ಮಾಡಿಸುತ್ತಾರೆಂಬ ಆರೋಪ ಕೇಳಿ ಬಂದಿತ್ತು. ಶಾಲೆಯಲ್ಲಿ ಡಿ ಗ್ರೂಪ್ ಸಿಬ್ಬಂದಿಗಳ ಕೊರತೆ ನೆಪವೊಡ್ಡಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಚ ಮಾಡಿಸುತ್ತಿದ್ದರಂತೆ. ಅಲ್ಲದೇ ಎರಡು ದಿನಕ್ಕೊಮ್ಮೆ ವಿದ್ಯಾರ್ಥಿಗಳನ್ನ ತಮ್ಮ ನಿವಾಸಕ್ಕೆ ಕರೆದುಕೊಂಡು ಹೋಗುವ ಜೋಹರ ಜಬೀನ್ ಮೇಡಂ ಮನೆಗೆಲಸ ಮಾಡಿಸುತ್ತಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೌಲಾನಾ ಆಜಾದ್ ಮಾದರಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳನ್ನ ಶಾಲೆಯ ಶೌಚಾಲಯ ಸ್ವಚ್ಛ ಮಾಡುವ ಕೆಲಸಕ್ಕೆ ಮತ್ತು ತರಗತಿ ಮುಗಿದನಂತರ ಮನೆಗೆ ಕರೆದುಕೊಂಡು ಹೋಗಿ ಗಾರ್ಡನ್ ಸ್ವಚ್ಛ ಹಾಗೂ ಮನೆಗೆಲಸಗಳನ್ನ ಮಾಡಿಸಿಕೊಳ್ಳುತ್ತಿದ್ದರಂತೆ. ಈ ಬಗ್ಗೆ ವಿದ್ಯಾರ್ಥಿಗಳು ಸಾಕಷ್ಟು ಬಾರಿ ಪೋಷಕರ ಬಳಿ ಹೇಳಿಕೊಂಡಿದ್ದರಂತೆ. ಆದರೆ ಹೋಗಲಿ ಬಿಡು. ಎಷ್ಟೇ ಆದರೂ ಶಿಕ್ಷಕರು ಅಲ್ವ ಅಂತಾ ಪೋಷಕರು ಸಹ ಸೈಲೆಂಟ್ ಆಗಿದ್ದರು‌.

ಶೌಚಾಲಯ ಸ್ವಚ್ಛಗೊಳಿಸುತ್ತಿರುವುದಕ್ಕೆ ಪೋಷಕರು ಸಿಡಿದೆದ್ದಿದ್ದಾರೆ. ಈ ಬಗ್ಗೆ ಮುಖ್ಯ ಶಿಕ್ಷಕಿ ಜೋಹರ ಜಬೀನ್ ವಿರುದ್ಧ ಪೋಷಕರು ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೋಷಕರ ದೂರಿನ ಅನ್ವಯ ಶಾಲಾ ಮುಖ್ಯ ಶಿಕ್ಷಕಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪೋಷಕರು ನೀಡಿರುವ ದೂರಿನ ಅನ್ವಯ ರೋಜಾ ಪೊಲೀಸ್ ಠಾಣೆಯಲ್ಲಿ ಮುಖ್ಯ ಶಿಕ್ಷಕಿ ಜೋಹರ ಜಬೀನ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ತನಿಖೆ ನಂತರವಷ್ಟೇ ನಿಜವಾಗಿಯೂ ವಿದ್ಯಾರ್ಥಿಗಳನ್ನ ಶೌಚಾಲಯ ಸ್ವಚ್ಛ ಹಾಗೂ ಮನೆಗೆಲಸಕ್ಕೆ ಬಳಸಿಕೊಳ್ಳುತ್ತಿದ್ರ ಅಥವಾ ಇಲ್ವ ಅನ್ನೊದು ತಿಳಿಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು