News Karnataka Kannada
Tuesday, April 30 2024
ಕಲಬುರಗಿ

ಈಶ್ವರಪ್ಪ ಅವರ ಮಾತಿಗೆ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ: ಪ್ರಿಯಾಂಕ್ ಖರ್ಗೆ

ಗುಂಡು ಹಾಕಿ ಕೊಲ್ಲುವ ಕಾನೂನು ತರಬೇಕೆಂಬ ಮಾಜಿ ಡಿಸಿಎಂ ಈಶ್ವರಪ್ಪ ಅವರ ಹೇಳಿಕೆ ಅವರ ವಿವೇಕತನ ಎಷ್ಟಿದೆ ಎಂದು ತೊರಿಸಿಕೊಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
Photo Credit : News Kannada

ಕಲಬುರಗಿ: ಗುಂಡು ಹಾಕಿ ಕೊಲ್ಲುವ ಕಾನೂನು ತರಬೇಕೆಂಬ ಮಾಜಿ ಡಿಸಿಎಂ ಈಶ್ವರಪ್ಪ ಅವರ ಹೇಳಿಕೆ ಅವರ ವಿವೇಕತನ ಎಷ್ಟಿದೆ ಎಂದು ತೊರಿಸಿಕೊಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಶನಿವಾರ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ರೆಕಾರ್ಡ್ ರೂಂ ಡಿಜಿಟೈಲೇಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಈಶ್ವರಪ್ಪ ಅವರಿಗೆ ಪಕ್ಷದಲ್ಲಿ ಇನ್ ವಾಲೆಂಟ್ರಿ ರಿಟೈರ್ಮೆಂಟ್ ಸಿಕ್ಕಿದೆ. ಪಕ್ಷದಲ್ಲಿ ಮಾರ್ಗದರ್ಶಕ ಮಂಡಲ್ಲದಲ್ಲಿಯೂ ಅವರಿಗೆ ಅವಕಾಶ ಸಿಕ್ಕಲ್ಲ ಅವರ ಮಾತನ್ನು ಗಂಭೀರ ತೆಗೆದುಕೊಳ್ಳುವ ಅಗತ್ಯ ವಿಲ್ಲ ಎಂದು ಹೇಳಿದರು.

ಹತ್ತು ವರ್ಷಗಳಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ವಿರುದ್ಧ ಕೈಜೊಡಿಸುವುದನ್ನು ಬಿಟ್ಟು ಬಿಜೆಪಿಯವರು ಮೋದಿ ಅವರ ಗುಲಾಮರಾಗಿ ಮಾತನಾಡುತ್ತಿದ್ದಾರೆ. ಏನು ಮಾಡಕ್ಕಾಗಲ್ಲ. ಹತ್ತು ವರ್ಷಗಳಲ್ಲಿ ಕೇಂದ್ರ ಸರಕಾರ ಕನ್ನಡಿಗರಿಗೆ ಏನು ಮಾಡಿದೆ ಎಂಬ ಪಟ್ಟಿ ಕೊಡಲಿ ಎಂದು ಹೇಳಿದರು.

ಕೇಂದ್ರ ಸರಕಾರ ಪಾರ್ಲಿಮೆಂಟಿನಲ್ಲಿ ರಾಜಕೀಯ ಭಾಷಣ ಮಾಡುವಾಗ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾತಾಡಲ್ಲ. ನೆಹರು, ರಾಜೀವ್ ಗಾಂಧಿ, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಈಗ ಖರ್ಗೆಅವರ ಹೆಸರನ್ನು ಹೇಳಿಕೊಂಡು ಭಾಷಣ ಮಾಡುತ್ತಾರೆ. ಇದು ಅವರ ಹತ್ತು ವರ್ಷದ ಸಾಧನೆ ಏನು ಎಂಬುದನ್ನು ತೋರಿಸಿಕೊಡುತ್ತದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು