News Karnataka Kannada
Wednesday, May 08 2024
ಕಲಬುರಗಿ

ಕಲಬುರಗಿಯಿಂದ ಬೆಂಗಳೂರಿಗೆ ರಾತ್ರಿ ವಿಮಾನ ಸೇವೆ ಶುರು

ದಿನಗಳಿಂದ ಇಲ್ಲಿನ ವಿಮಾನ ನಿಲ್ದಾಣದಿಂದ ನಿರೀಕ್ಷಿಸಲಾಗುತ್ತಿದ್ದ ರಾತ್ರಿ ವಿಮಾನಯಾನ ಸಂಚಾರ ಸೇವೆಗೆ ಈಗ ಕಾಲ ಕೂಡಿ ಬರುತ್ತಿದ್ದು, ಇದೇ ಫೆ. 22ರಂದು ಪ್ರಾಯೋಗಿಕವಾಗಿ ರಾತ್ರಿ ವಿಮಾನ ಸಂಚಾರ ಶುರುವಾಗಲಿದೆ.‌
Photo Credit : News Kannada

ಕಲಬುರಗಿ: ದಿನಗಳಿಂದ ಇಲ್ಲಿನ ವಿಮಾನ ನಿಲ್ದಾಣದಿಂದ ನಿರೀಕ್ಷಿಸಲಾಗುತ್ತಿದ್ದ ರಾತ್ರಿ ವಿಮಾನಯಾನ ಸಂಚಾರ ಸೇವೆಗೆ ಈಗ ಕಾಲ ಕೂಡಿ ಬರುತ್ತಿದ್ದು, ಇದೇ ಫೆ. 22ರಂದು ಪ್ರಾಯೋಗಿಕವಾಗಿ ರಾತ್ರಿ ವಿಮಾನ ಸಂಚಾರ ಶುರುವಾಗಲಿದೆ.‌

ಫೆಬ್ರವರಿ 22 ರಂದು Alliance Airlines ರವರಿಂದ ಸಾಯಂಕಾಲ 6:45 ಗಂಟೆ ಬೆಂಗಳೂರಿನಿಂದ ಹೊರಟು ರಾತ್ರಿ 8 ಗಂಟೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬರಲಿದೆ.ತದನಂತರ ಇದೇ ವಿಮಾನ ರಾತ್ರಿ 8:45 ಗಂಟೆಗೆ ಕಲಬುರಗಿಯಿಂದ ಹೊರಟು ಬೆಂಗಳೂರಿಗೆ ರಾತ್ರಿ 10ಕ್ಕೆ ತಲುಪಲಿದೆ.

ಫೆ.‌22 ರಿಂದ Alliance Airlines ನವರು ಪ್ರಾಯೋಗಿಕವಾಗಿ ಪ್ರತಿ ಗುರುವಾರ ರಾತ್ರಿ ವಿಮಾನ ಸೇವೆ ಪ್ರಾರಂಭ ಮಾಡುತ್ತಿದ್ದು, ಹಾಗೆಯೇ ಮುಂಬರುವ ದಿನಗಳಲ್ಲಿ ಪ್ರತಿದಿನ ಸೇವೆ ಪ್ರಾರಂಭವಾಗಲಿದೆ.

ಕಲಬುರಗಿಯಿಂದ ರಾತ್ರಿ ವಿಮಾನ ಸಂಚಾರ ಪ್ರಾರಂಭವಾಗಬೇಕೆಂದು ಬಹುದಿನಗಳ ಬೇಡಿಕೆ ಈಗ ಈಡೇರಿದಂತಾಗಿದೆ.‌ ಅದಲ್ಲದೇ ದೇಶದ ವಿವಿಧಡೆ ವಿಮಾನಯಾನ ಆರಂಭಿಸುವ ನಿಟ್ಟಿನಲ್ಲಿ ಈ ಮೈಲಿಗಲ್ಲು ಸಾಬೀತು ಆಗಲಿದೆ.

ರಾಜ್ಯದ ಎರಡನೇ ಅತಿ ಉದ್ದದ ರನ್ ವೇ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣದಿಂದ 2019ರ ನವೆಂಬರ್ 23 ರಿಂದ ವಿಮಾನ ಹಾರಾಟ ಶುರುವಾಗಿದ್ದು, ವರ್ಷ ಇಲ್ಲವೇ ಎರಡು ವರ್ಷದೊಳಗೆ ರಾತ್ರಿ ವಿಮಾನ ಹಾರಾಟ ಶುರುವಾಗುವುದು ಎಂದು ನಿರೀಕ್ಷಿಸಲಾಗಿತ್ತು.‌ ಈಗ ಕನಸು ಸಾಕಾರಗೊಂಡಂತಾಗಿದೆ.

ಸತತ ಪ್ರಯತ್ನ ಫಲವಾಗಿ ಕೊನೆಗೂ ಕಲಬುರಗಿ ವಿಮಾನ ನಿಲ್ದಾಣದಿಂದ ರಾತ್ರಿ ವಿಮಾನ ಹಾರಾಟ ಶುರುವಾಗುತ್ತಿರುವುದಕ್ಕೆ ಕಲಬುರಗಿ ಸಂಸದ ಡಾ.‌ಉಮೇಶ ಜಾಧವ್ ಹರ್ಷ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು