News Karnataka Kannada
Tuesday, May 07 2024
ಕಲಬುರಗಿ

ಅಫಜಲಪುರ ಕ್ಷೇತ್ರದ ಬಡವರಿಗೆ ಕಲಬುರ್ಗಿ ಶಾಂತಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ

ತೀವ್ರ ಬರಗಾಲದ ಛಾಯೆ ಆವರಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಬಡವರಿಗೆ ನೆರವಾಗುವ ಮಾನವೀಯ ದೃಷ್ಟಿಯಿಂದ ಕಲಬುರ್ಗಿಯಲ್ಲಿನ ನಮ್ಮ ಶಾಂತಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಾಸಕ ಎಂ.ವೈ. ಪಾಟೀಲ್ ಅವರ ಪುತ್ರ ಡಾ. ಸಂಜೀವ್ ಎಂ.ವೈ. ಪಾಟೀಲ್ ಅವರು ಹೇಳಿದರು.
Photo Credit : News Kannada

ಅಫಜಲಪುರ: ತೀವ್ರ ಬರಗಾಲದ ಛಾಯೆ ಆವರಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಬಡವರಿಗೆ ನೆರವಾಗುವ ಮಾನವೀಯ ದೃಷ್ಟಿಯಿಂದ ಕಲಬುರ್ಗಿಯಲ್ಲಿನ ನಮ್ಮ ಶಾಂತಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಾಸಕ ಎಂ.ವೈ. ಪಾಟೀಲ್ ಅವರ ಪುತ್ರ ಡಾ. ಸಂಜೀವ್ ಎಂ.ವೈ. ಪಾಟೀಲ್ ಅವರು ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಎಂ.ವೈ. ಪಾಟೀಲ್ ಫೌಂಡೇಶನ್ ಅಡಿಯಲ್ಲಿ ಕಲಬುರ್ಗಿಯಲ್ಲಿ ನಿರ್ಮಾಣಗೊಂಡ ಶಾಂತಾ ಆಸ್ಪತ್ರೆಯಲ್ಲಿ ಇಂತಹ ಸೌಲಭ್ಯ ದೊರಕಲಿದೆ ಎಂದರು.

ಸಾಮಾನ್ಯ ಔಷಧಿಗಳು, ಹೃದಯ ಶಾಸ್ತ್ರ, ನರವಿಜ್ಞಾನ, ಮೂತ್ರಪಿಂಡ ಶಾಸ್ತ್ರ, ಸಂಧಿವಾತ ಶಾಸ್ತ್ರ, ಅಂತಃಶ್ರಾವ ಶಾಸ್ತ್ರ, ಶ್ವಾಸಕೋಶ ಶಾಸ್ತ್ರ (ಎದೆಯ ಚಿಕಿತ್ಸೆ), ಗ್ಯಾಸ್ಟ್ರಿಕ್ ಎಂಟರಾಲಾಜಿ, ಸಾಮಾನ್ಯ ಮತ್ತು ಲ್ಯಾಪರೋಸ್ಕೋಪಿಕ್ ಶಾಸ್ತ್ರಚಿಕಿತ್ಸೆ, ಲೇಸರ್ ಪ್ರೋಕ್ಟಾಲಾಜಿ, ಗ್ಯಾಸ್ಟೋಎಂಟರಾಲಾಜಿ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಮೂತ್ರ ಶಾಸ್ತ್ರ, ನರ ಶಸ್ತ್ರಚಿಕಿತ್ಸೆ, ಗ್ರಂಥಿ ಶಾಸ್ತ್ರಶಸ್ತ್ರಚಕಿತ್ಸೆ ಮುಂತಾದ ಎಲ್ಲ ಚಿಕಿತ್ಸಾ ಸೌಲಭ್ಯಗಳು ಆಸ್ಪತ್ರೆಯಲ್ಲಿವೆ. ಮಾಡ್ಯೂಲರ್ ಆಪರೇಷನ್ ಥೇಟರ್‌ನ್ನೂ ಸಹ ಆಸ್ಪತ್ರೆ ಹೊಂದಿದೆ ಎಂದು ಅವರು ತಿಳಿಸಿದರು.

ಕ್ಷೇತ್ರದ ಬಡ ಜನರಿಗೆ ತುರ್ತು ಪರಿಸ್ಥಿತಿಯಲ್ಲಿ ಹಾಗೂ ಅಪಘಾತದ ಸಂದರ್ಭದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಶಾಂತಾ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಕೊಡಲಾಗುವುದು ಎಂದು ಘೋಷಿಸಿದ ಅವರು, ಇಂತಹ ಖಾಸಗಿ ಯೋಜನೆಯ ಸದುಪಯೋಗವನ್ನು ಕ್ಷೇತ್ರದ ಜನರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ತಂದೆ ಶಾಸಕರಾದ ಎಂ.ವೈ. ಪಾಟೀಲ್ ಅವರು ತಮ್ಮ 50 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ರಾಜ್ಯ, ಜಿಲ್ಲೆ ಹಾಗೂ ಕ್ಷೇತ್ರದಲ್ಲಿ ಜನಸೇವೆ ಮಾಡಿಕೊಂಡು ಬಂದಿದ್ದಾರೆ. 83 ವರ್ಷಗಳಾದರೂ ಸಹ ತಮ್ಮ ಜನಸೇವೆಯನ್ನೇ ಅವರು ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಇಂತಹ ಉಚಿತ ಸೇವೆ ಕೊಡುವುದು ನನಗೆ ಸಂತೋಷ ಹಾಗೂ ಹೆಮ್ಮೆಯಾಗುತ್ತಿದೆ ಎಂದು ಅವರು ಹೇಳಿದರು.

ಈ ಬಾರಿ ಮಳೆ ಇಲ್ಲದೇ ಬೆಳೆಗಳೂ ಕೈಕೊಟ್ಟು ರೈತ, ಕೃಷಿ ಕಾರ್ಮಿಕರು, ಬಡವರೂ ಸೇರಿದಂತೆ ಎಲ್ಲರೂ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸಬೇಕು ಎಂಬ ಏಕೈಕ ಉದ್ದೇಶದಿಂದ ಇಂತಹ ದಿಟ್ಟ ಜನಪರ ಸೇವಾ ಸೌಲಭ್ಯದ ಯೋಜನೆಯನ್ನು ನಮ್ಮ ಆಸ್ಪತ್ರೆಯಿಂದ ಜಾರಿಗೊಳಿಸಿದ್ದೇವೆ. ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕಲಬುರ್ಗಿ ತಾಲ್ಲೂಕಿನ ಫರತಾಬಾದ್ ಹೋಬಳಿ ಸೇರಿ ಕ್ಷೇತ್ರದ ಎಲ್ಲ ರೈತ, ಕೃಷಿ, ಕಾರ್ಮಿಕರು, ಬಡವರು ಇಂತಹ ವೈದ್ಯಕೀಯ ಸೌಲಭ್ಯವನ್ನು ಪಡೆಯಬೇಕು ಎಂದು ಅವರು ಕೋರಿದರು.

ಕಲಬುರ್ಗಿಯಲ್ಲಿ ಸುಮಾರು 50 ಸುಸಜ್ಜಿತ ಬಹುದುದ್ದೇಶ ಚಿಕಿತ್ಸೆಯ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಅಲ್ಲಿ ಶಸ್ತ್ರಚಿಕಿತ್ಸೆ ಸೇರಿದಂತೆ ಕಣ್ಣು, ಅಪಘಾತ ಸೇರಿದಂತೆ ಎಲ್ಲ ರೋಗಗಳಿಗೂ ಸೂಕ್ತ ಚಿಕಿತ್ಸೆ ದೊರೆಯಲಿದೆ. ತುರ್ತು ಚಿಕಿತ್ಸಾ ಘಟಕವೂ ಇದೆ. ಹೀಗಾಗಿ ಕ್ಷೇತ್ರದ ಜನರಿಗೆ ಅನುಕೂಲ ಆಗುವ ಉದ್ದೇಶದಿಂದ ಇಂತಹ ಉಚಿತ ಯೋಜನೆ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಕಲಬುರ್ಗಿಯಲ್ಲಿನ ಆಸ್ಪತ್ರೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಉಚಿತ ಚಿಕಿತ್ಸೆಯನ್ನು ಕೊಡುವ ಸಂಬಂಧ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಆ ಕುರಿತು ಶೀಘ್ರ ಒಪ್ಪಂದವಾಗಲಿದೆ. ಆ ಸಂದರ್ಭದಲ್ಲಿಯೂ ಸಹ ಬಡವರು ಉಚಿತ ಪಡೆಯಬಹುದಾಗಿದೆ.

ಆದಾಗ್ಯೂ, ಬರಗಾಲದ ಹಿನ್ನೆಲೆಯಲ್ಲಿ ಅಂತಹ ಯೋಜನೆ ನಮ್ಮ ಆಸ್ಪತ್ರೆಯಲ್ಲಿ ಸದ್ಯಕ್ಕೆ ಜಾರಿಯಲ್ಲಿ ಇರದೇ ಇದ್ದರೂ ಸಹ ಕ್ಷೇತ್ರದ ಬಡವರು, ಕೃಷಿ ಕಾರ್ಮಿಕರು, ಶ್ರಮಿಕರು ಉಚಿತ ಚಿಕಿತ್ಸೆ ಕಲ್ಪಿಸುವಂತಹ ಜನಪರ ನಿಲುವು ಕೈಗೊಂಡಿದ್ದಾಗಿ ಅವರು ಸ್ಪಷ್ಟಪಡಿಸಿದರು.ಇನ್ನು ಆಸ್ಪತ್ರೆಗೆ ಕಲಬುರ್ಗಿಗೆ ಹೋಗಲು ಉಚಿತ ಅಂಬುಲೆನ್ಸ್ ವ್ಯವಸ್ಥೆಯನ್ನು ಪಟ್ಟಣದಲ್ಲಿ ಕಲ್ಪಿಸಲಾಗಿದೆ. ಇಂತಹ ಅಂಬುಲೆನ್ಸ್ ವ್ಯವಸ್ಥೆಯನ್ನು ಹೋಬಳಿ ಮಟ್ಟದಲ್ಲಿಯೂ ಸಹ ಮಾಡುವ ಯೋಜನೆ ಇದೆ. ಸಂಪನ್ಮೂಲ ಕೊರತೆಯಿಂದಾಗಿ ಅದು ವಿಳಂಬವಾಗಲಿದೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಮಾದಾರ್ ಅವರು ಮಾತನಾಡಿ, ತಾಲ್ಲೂಕಿನಲ್ಲಿ ಶಾಸಕರ ಪುತ್ರರಾದ ಅರುಣಕುಮಾರ್ ಪಾಟೀಲ್ ಹಾಗೂ ಡಾ. ಸಂಜೀವ್ ಪಾಟೀಲ್ ಅವರು ತಮ್ಮ ತಂದೆ ಶಾಸಕ ಎಂ.ವೈ. ಪಾಟೀಲ್ ಅವರಂತೆಯೇ ಜನರ ಸೇವೆಗಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ. ಅದೇ ರೀತಿ ಕ್ಷೇತ್ರದ ಜನರಿಗಾಗಿ, ಬಡವರಿಗಾಗಿ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಅನೇಕ ಕಡೆಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ್ದಾರೆ. ಅವರ ಸೇವೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕ್ಷೇತ್ರದ ಜನರಿಗೆ ಸಿಗಲಿ ಎಂದು ಆಶಿಸಿದರು.

ಸುದ್ದಿಗೋಷ್ಠಿಯಲ್ಲಿ ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್ ಕರ್ಜಗಿ, ಅನಿಲ್ ಕಾಚಾಪುರ್, ಅಂಬರೀಷ್ ಬುರಲಿ, ಸಿದ್ದು, ಪ್ರವೀಣ್ ಕಲ್ಲೂರ್, ಸೈಫಾನ್ ಚಿಕ್ಕಳ್ಳಗಿ, ಶರಣು ಬಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು