News Karnataka Kannada
Saturday, May 11 2024
ಕಲಬುರಗಿ

ಹುಚ್ಚುನಾಯಿ ಕಡಿತ: ಐವರು ಮಕ್ಕಳಿಗೆ ಗಾಯ

Dog Bite 10082021
Photo Credit :

ಕಲಬುರ್ಗಿ: ಇಲ್ಲಿನ ‌‌ಮೋಮಿನ್‌ಪುರ ಬಡಾವಣೆಯಲ್ಲಿ ಐವರು ಮಕ್ಕಳಿಗೆ ಹುಚ್ಚುನಾಯಿ ಕಚ್ಚಿದೆ.

ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಮಂಗಳವಾರ ಜಿಮ್ಸ್‌ನ ಮಕ್ಕಳ ವಿಭಾಗದಲ್ಲಿ ದಾಖಲಿಸಲಾಗಿದೆ.

ಮನೆಯ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ರಿಹಾನ್‌ ಹಾಗೂ ಆರು ವರ್ಷದ ನಬಿಲಾ ಅವರ ಮೇಲೆ ನಾಯಿ ಮೊದಲು ದಾಳಿ ಮಾಡಿದೆ. ಈ ಇಬ್ಬರು ಮಕ್ಕಳ ತಲೆಗೆ ಕಚ್ಚಿ, ಎಳೆದಾಡಿದೆ. ತೀವ್ರ ರಕ್ತಸ್ರಾವದಿಂದ ಅಸ್ವಸ್ಥರಾದ ಮಕ್ಕಳನ್ನು ಸಂತ್ರಾಸವಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ಜಿಮ್ಸ್‌ನ ಮಕ್ಕಳ ವಾರ್ಡ್‌ಗೆ ದಾಖಲಿಸಲಾಗಿದೆ.

ಈ ಇಬ್ಬರನ್ನೂ ಕಚ್ಚಿದ ಬಳಿಕ ಅದೇ ನಾಯಿ ಮುಂದೆ ಓಡಿ ಮೂರು ವರ್ಷದ ಇನ್ನಿಬ್ಬರು ಮಕ್ಕಳ ಕೈ, ಕಾಲು, ಚಪ್ಪೆ, ಭುಜಕ್ಕೆ ಕಚ್ಚಿದೆ. ಮಕ್ಕಳ ಚೀರಾಟ ಕೇಳಿ ಸುತ್ತಲಿದ್ದ ಜನ ನಾಯಿಯನ್ನು ಓಡಿಸಿದರು.

ಆದರೆ, ಮಂಗಳವಾರ ಬೆಳಿಗ್ಗೆ ಮತ್ತೆ ಇದೇ ಪ್ರದೇಶಕ್ಕೆ ನುಗ್ಗಿದ ನಾಯಿ ನಾಲ್ಕು ವರ್ಷದ ಮತ್ತೊಬ್ಬ ಬಾಲಕನಿಗೆ ಕಚ್ಚಿದೆ. ಈ ಮೂವರಿಗೂ ಕೈ– ಕಾಲಿನ ಚರ್ಮಗಳು ಕಿತ್ತುಬಂದಿದ್ದು, ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.‌

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು