News Karnataka Kannada
Monday, May 06 2024
ಕಲಬುರಗಿ

ಕುಡಿದ ಮತ್ತಿನಲ್ಲಿ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ!

Death
Photo Credit :

ಕಲಬುರಗಿ: ಪ್ರಿಯಕರನೇ ಕುಡಿದ ಮತ್ತಿನಲ್ಲಿ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ನೂರಾನಿ ಮೊಹಲ್ಲ ಬಡಾವಣೆಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಪತಿ ದುಬೈನಲ್ಲಿದ್ದ ಹಿನ್ನೆಲೆಯಲ್ಲಿ ಮತ್ತೊಬ್ಬನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ಕೊಲೆಗೀಡಾಗಿದ್ದಾಳೆ.

ಕಲಬುರಗಿ ನಗರದ ನೂರಾನಿ ಮೊಹಲ್ಲ ಬಡಾವಣೆಯ ನಿವಾಸಿ ಶಹನಾ ಬೇಗಂ ಎಂಬಾಕೆಯೇ ಕೊಲೆಯಾದ ಮಹಿಳೆ. 2004ರಲ್ಲಿ ಶಹನಾ ಬೇಗಂ ಮದುವೆಯಾಗಿದ್ದು, ಬಳಿಕ ಪತಿ ಕೆಲಸಕ್ಕೆಂದು ದುಬೈಗೆ ಹೋಗಿದ್ದ. ಗಂಡ ಹೋದ ಬಳಿಕ ಮಹಿಳೆಯು ತನಗಿಂತ ಕಿರಿಯಯಾದ ಯುವಕ ವಸಿಂ ಅಕ್ರಮ ಎಂಬಾತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇಬ್ಬರೂ ಲಿವಿಂಗ್ ಟುಗೇದರ್ ಅಂತ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು.

ಗಂಡ ದುಬೈನಲ್ಲಿ ಇರುವುದನ್ನೇ ದುರುಪಯೋಗ ಮಾಡಿಕೊಂಡು ಮತ್ತೊಬ್ಬನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ದುರಂತ ಅಂತ್ಯ ಕಂಡಿದ್ದಾಳೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು