News Karnataka Kannada
Sunday, April 28 2024
ಬೀದರ್

ಬೀದರ್ ನ ವಾಯು ಸೇನಾ ನೆಲೆಯಲ್ಲಿ ಪೈಲಟ್ ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆ ತರಬೇತಿ ಕೋರ್ಸ್ ಮುಕ್ತಾಯ

Valedictory ceremony of pilot and weapon systems training course at Air Force Base, Bidar
Photo Credit : News Kannada

ಬೀದರ್: ವಾಯು ನೆಲೆಯಲ್ಲಿ 208 ನೆ ವಾಯು ಸೇನೆ ಅಧಿಕಾರಿಗಳ ಪೈಲಟ್ ತರಬೇತಿ ಹಾಗೂ 23 ನೆ ಶಸ್ತ್ರಾಸ್ತ್ರ ವ್ಯವಸ್ಥೆ ತರಬೇತಿ ಯ 52 ವಾರಗಳ ಕೋರ್ಸ್ ಶುಕ್ರವಾರ ಮುಕ್ತಾಯವಾಯಿತು.

ಅದರ ಅಂಗವಾಗಿ ನಡೆದ ಸಮಾರಂಭ ದಲ್ಲಿ ವಾಯು ಸೇನೆ ತರಬೇತಿ ವಿಭಾಗದ ಏರ್ ಆಫೀಸರ್ ಕಮಾಂಡಿಂಗ ಇನ್ ಚೀಫ್ , ಏರ್ ಮಾರ್ಷಲ್ ಆರ್ ರಾಧೀಶ , ಅವರು ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದರು.

ಒಟ್ಟು 13 ಜನ ಪೈಲಟ್ ಹಾಗೂ 4 ಶಸ್ತ್ರಾಸ್ತ್ರ ವ್ಯವಸ್ಥೆ ತರಬೇತಿ ಅಧಿಕಾರಿ ಗಳು ತಮ್ಮ ತರಬೇತಿ ಪೂರೈಸಿ ಪ್ರಮಾಣ ಪತ್ರ ಪಡೆದರು.

ಅವರನ್ನು ಉದ್ದೇಶಿಸಿ ಮಾತನಾಡಿದ ಏರ್ ಮಾರ್ಷಲ್ ಅವರು ಅಧಿಕಾರಿ ಗಳಿಗೆ ಶುಭಾಶಯ ಕೋರಿದರು. ಫ್ತ್ಲೆಯಿಂಗ್ ಆಫೀಸರ್ ಅಮನ ಪವರ್ ಅವರಿಗೆ ಸರ್ವೋತ್ತಮ ಶ್ರೇಷ್ಟ ಪೈಲಟ್ ವಿದ್ಯಾರ್ಥಿ ಹಾಗೂ ಫ್ತ್ಲೆಯಿಂಗ್ ಆಫೀಸರ್ ಪವನ್ ಕುಮಾರ್ ಅವರಿಗೆ ಸರ್ವೋತ್ತಮ ಶ್ರೇಷ್ಟ ಶಸ್ತ್ರಾಸ್ತ್ರ ವ್ಯವಸ್ಥೆ ತರಬೇತಿ ವಿದ್ಯಾರ್ಥಿ ಪುರಸ್ಕಾರ ನೀಡಲಾಯಿತು.

ಬೀದರ್ ವಾಯು ಸೇನಾ ನೆಲೆಯ ಏರ್ ಆಫೀಸರ್ ಕಮಾಂಡಿಂಗ ಆಫೀಸರ್ , ಏರ್ ಕೊಮೊಡೋರ ಅಭಿಜಿತ್ ನೇನೆ, ಅವರು ಏರ್ ಮಾರ್ಷಲ್ ಅವರಿಗೆ ನೆಲೆಯ ಆಡಳಿತಾತ್ಮಕ, ಹಾಗೂ ತರಬೇತಿ ವಿವರ ಗಳನ್ನು ನೀಡಿದರು. ಇತರ ಅಧಿಕಾರಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು