News Karnataka Kannada
Monday, May 13 2024
ಬೀದರ್

ಅಂಚೆ ಮತ ಪತ್ರದ ಅರ್ಹರಿಗೆ ಮೇ1 ರಿಂದ 5ರವರೆಗೆ ಮನೆಯಿಂದ ಮತದಾನ ಮಾಡಲು ಅವಕಾಶ

Those eligible for postal ballots will be allowed to vote from home from May 1 to 5
Photo Credit : News Kannada

ಬೀದರ್, ಏ.28: ಬೀದರ್ ಜಿಲ್ಲೆಯ ಆರು ವಿಧಾನಸಭಾ ಮತಕ್ಷೇತ್ರಗಳಲ್ಲಿ 80 ವರ್ಷ ಮೇಲ್ಪಟ್ಟ 12764 ಪುರುಷ ಮತದಾರರು 17154 ಮಹಿಳಾ ಮತದಾರರು ಸೇರಿ ಒಟ್ಟು 29918 ಮತದಾರರು ಇದ್ದು, ಮೇ 1 ರಿಂದ 5 ರವರೆಗೆ ಮನೆಯಿಂದ ಮತದಾನ ಮಾಡಲು 598 ಮತದಾರರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ-2023ರ ಬೀದರ ಜಿಲ್ಲೆಯ ತಯಾರಿ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬೀದರ್ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 1506 ಮತಗಟ್ಟೆ ಕೇಂದ್ರಗಳಿದ್ದು, 80 ವರ್ಷ ಮೇಲ್ಪಟ್ಟ 29918 ಮತದಾರರು ಇದ್ದು, ವಿಶೇಷ ಚೇತನರು 22883 ಮತದಾರರು ಸೇರಿ ಒಟ್ಟು 52801 ಇರುತ್ತಾರೆ. ಇದರಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸುವವರು 40768 ಇದ್ದು, ಆಟೋ ಮೂಲಕ ಬಂದು ಮತ ಚಲಾಯಿಸುವವರು 11435, 80 ವರ್ಷ ಮೇಲ್ಪಟ್ಟ 598 ಮತದಾರರು ಹಾಗೂ ವಿಶೇಷ ಚೇತನ 193 ಮತದಾರರು ಮನೆಯಿಂದ ಮತ ಚಲಾಯಿಸುವವರಿದ್ದಾರೆ ಎಂದು ಹೇಳಿದರು. ವಿಶೇಷ ಚೇತನ 13738 ಪುರುಷ ಮತದಾರರು, 9145 ಮಹಿಳಾ ಮತದಾರರು ಸೇರಿ ಒಟ್ಟು 22883 ಮತದಾರರು ಇದ್ದು, ಇದರಲ್ಲಿ 193 ಮತದಾರರನ್ನು ಮನೆಯಿಂದ ಮತ ಚಲಾಯಿಸುತ್ತಾರೆ ಎಂದರು.

ಮತದಾರರ ಪಟ್ಟಿಯಂತೆ ಒಟ್ಟು ಅಂಚೆ ಮತದಾರರ ವಿವರ: ಬೀದರ ಜಿಲ್ಲೆಯ ಆರು ವಿಧಾನಸಭಾ ಮತಕ್ಷೇತ್ರಗಳಲ್ಲಿ 80 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು ಅಂಗವಿಕಲರು (ಪಿಡಬ್ಲ್ಯೂಡಿ) 791 ಮತದಾರರು, ಅಗತ್ಯ ಸೇವೆಗಳ ಮೇಲಿರುವ ಗೈರು ಹಾಜರಿ ಮತದಾರರು 778 ಇದ್ದು, ಪೊಲೀಸ್ 987, ಗೃಹ ರಕ್ಷಕ ದಳ 679, ಇತರೆ 621, ಚುನಾವಣಾ ಸಿಬ್ಬಂದಿ 4552 ಇದ್ದು ಒಟ್ಟು ಗುರುತಿಸಿದ ಅಂಚೆ ಮತ ಪತ್ರಗಳು 8408 ಇರುತ್ತಾರೆ.

ಈ ಪೈಕಿ 80 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು ಅಂಗವಿಕಲರು (ಪಿಡಬ್ಲ್ಯೂಡಿ) ಇವರು ಮೇ 1 ರಿಂದ ಮೇ 5 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನೊಂದಾಯಿತ ವಿಧಾನಸಭಾ ಕ್ಷೇತ್ರದ ಅಗತ್ಯ ಸೇವೆಗಳ ಮೇಲಿರುವ ಗೈರು ಹಾಜರಿ ಮತದಾರರಿಗೆ ಮೇ 2 ರಿಂದ ಮೇ 4 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ನೊಂದಾಯಿತ ವಿಧಾನಸಭಾ ಕ್ಷೇತ್ರದ ಚುನಾವಣಾ ಕರ್ತವ್ಯ ಸಿಬ್ಬಂದಿ (ಪೊಲೀಸ್+ಗೃಹರಕ್ಷಕದಳ) ಗಳಿಗೆ ಮೇ 2 ರಿಂದ ಮೇ 4 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹಾಗೂ ನೊಂದಾಯಿತ ವಿಧಾನಸಭಾ ಕ್ಷೇತ್ರದ ಚುನಾವಣಾ ಕರ್ತವ್ಯದಲ್ಲಿರುವ ಇತರೆ ಸಿಬ್ಬಂದಿಗಳಿಗೆ ಮೇ 3 ರಿಂದ ಮೇ 4 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಮತದಾರನೆಂದು ನೊಂದಾಯಿಸಿಕೊಂಡಿರುವ ವಿಧಾನಸಭಾ ಕ್ಷೇತ್ರದಲ್ಲಿ ಸೌಲಭ್ಯ ಕೇಂದ್ರದಿಂದ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ಚುನಾವಣಾ ಸಿಬ್ಬಂದಿಗಳು ಮೇ 3 ರಿಂದ 4 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕರ್ತವ್ಯಕ್ಕೆ ನಿಯೋಜಿತರಾದ ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಬೀದರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಪಿಂಕ ಮತಟ್ಟೆಗಳು ಒಟ್ಟು 30, ಯುವ ಮತಟ್ಟೆಗಳು 6 ಪಿ.ಡಬ್ಲೂö್ಯ.ಡಿ. (ಅಂಗವಿಕಲ) ಮತಗಟ್ಟೆಗಳು 6, ಬಿದರಿ ಕಲೆಯ ಮತಗಟ್ಟೆಗಳು 2 ಇರುತ್ತವೆ.

ತಾತ್ಕಾಲಿಕ ಸುರಕ್ಷಿತ ಮತಗಟ್ಟೆ ವಿವರ:

ಬೀದರ ಜಿಲ್ಲೆಯ ಆರು ವಿಧಾನಸಭಾ ಮತಗಟ್ಟೆಯಲ್ಲಿ 1506 ಮತಗಟ್ಟೆಗಳು ಇದ್ದು, ಕ್ರಿಟಿಕಲ್ ಮತಗಟ್ಟೆಗಳು 301, ಕ್ರಿಟಿಕಲ್ ಮತಗಟ್ಟೆಗಳ ಸಿಎಎಫ್ ನಿಯೋಜನೆ 278, ವೆಬ್‌ಕಾಸ್ಟಿಂಗ್ ಮಾಡುವ ಮತಗಟ್ಟೆಗಳು 950, ಮೈಕ್ರೋ ವೀಕ್ಷಕರು 180 ಹಾಗೂ 135 ವಿಡಿಯೋ ಗ್ರಾರ‍್ಸ್ ಇರಲಿದ್ದಾರೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 1506 ಮತಗಟ್ಟೆ ಕೇಂದ್ರಗಳನ್ನು ಗುರುತಿಸಲಾಗಿದ್ದು, ಇಲ್ಲಿ ಪುರುಷ ಮತದಾರರು 710403, ಮಹಿಳಾ ಮತದಾರರು 664724, ಮಂಗಳಮುಖಿಯರು 42 ಸೇರಿ ಒಟ್ಟು 1375169 ಮತದಾರರು ಜಿಲ್ಲೆಯಲ್ಲಿದ್ದಾರೆ. ಮತಗಟ್ಟೆಗಳು ನಗರ ಪ್ರದೇಶಗಳಲ್ಲಿ 220, ಗ್ರಾಮೀಣ ಪ್ರದೇಶಗಳಲ್ಲಿ 1286 ಸೇರಿ ಒಟ್ಟು 1506 ಮತಗಟ್ಟೆಗಳು 1017 ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಎಂ. ಅವರು ಮಾತನಾಡಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ 2018ರ ವಿದಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಮತಗಟ್ಟೆಗಳ ವ್ಯಾಪ್ತಿಯಲ್ಲಿ ವಿವಿಧ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರು ಹೆಚ್ಚು ಮತದಾನ ಮಾಡಲು ಅವರಲ್ಲಿ ಮತದಾನ ಜಾಗೃತಿ ಮೂಢಿಸಲಾಗುತ್ತಿದೆ ಎಂದರು.

ಮೇ 10 ರಂದು ನಡೆಯಲಿರುವ ಮತದಾನದ ಅಂಗವಾಗಿ ಏಪ್ರಿಲ್ 30 ರಂದು ನಮ್ಮ ನಡೆ ಮತಗಟ್ಟೆ ಕಡೆ ಎಂಬ ಕಾರ್ಯಕ್ರಮವನ್ನು ರಾಜ್ಯಾದಾದ್ಯಂತ ಏಕ ಕಾಲದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಮತದಾನ ಎಂಬ ಧ್ಯೇಯ ಒಳಗೊಂಡಿರುವ ಭಾವುಟದ ಧ್ವಜಾರೋಹಣವನ್ನು ಅಂದು ಬೆಳಿಗ್ಗೆ 8 ಗಂಟೆಗೆ ಪ್ರತಿ ಮತಗಟ್ಟೆಗಳಲ್ಲಿ ಮಾಡಲಾಗುತ್ತದೆ. ಮತಗಟ್ಟೆ ಹಂತದಲ್ಲಿ ಮತಗಟ್ಟೆ ಅಧಿಕಾರಿಗಳ ನೇತೃತ್ವದಲ್ಲಿ, ಗ್ರಾಮ ಪಂಚಾಯತ ಮಟ್ಟದಲ್ಲಿ ಪಿಡಿಓ ನೇತೃತ್ವದಲ್ಲಿ, ತಾಲೂಕು ಮಟ್ಟದಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳ ನೇತೃತ್ವದಲ್ಲಿ, ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಈ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಶಿವಕುಮಾರ ಶೀಲವಂತ, ಚುನಾವಣಾ ತಹಸೀಲ್ದಾರರಾದ ಗೋಪಾಲ ಕಪೂರ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಸುರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು