News Karnataka Kannada
Tuesday, May 07 2024
ಬೀದರ್

ರೇಕುಳಗಿ ಗ್ರಾಮ ಪಂಚಾಯತ್ ನಲ್ಲಿ ನಕಲಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳ ದರ್ಬಾರ್

Rekulagi Grama Durbar of fake president, vice-president, members in panchayat
Photo Credit : News Kannada

ಬೀದರ್:‌ ರೇಕುಳಗಿ ಗ್ರಾಮ ಪಂಚಾಯತ್ ನಲ್ಲಿ ನಕಲಿ ಅಧ್ಯಕ್ಷರು ನಕಲಿ ಉಪಾಧ್ಯಕ್ಷರು , ಹಾಗೂ ನಕಲಿ ಸದಸ್ಯರುಗಳ ಹಾವಳಿ ಹೆಚ್ಚಾಗಿದ್ದು ಅವರ ಮೂಲ ಸದಸ್ಯತ್ವವನ್ನು ಪತ್ತೆ ಹಚ್ಚಿ ಅವರ ಸದಸ್ಯವನ್ನು ರದ್ದುಪಡಿಸಬೇಕು ಹಾಗೂ  ಸಂಬಂಧಪಟ್ಟ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಅವರ ಮೇಲೆ ಕ್ರಮ ತಗೊಳ್ಳಬೇಕು ಎಂದು ಇತರ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೇಕುಳಗಿ ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ಸದಸ್ಯರು 10 ಜನ , ಪುರುಷ ಸದಸ್ಯರು 10 ಜನ ಒಟ್ಟು ಸದಸ್ಯರುಗಳ ಸಂಖ್ಯೆ 20 ಜನ ಸದಸ್ಯರಿದ್ದು ರೇಕುಳಗಿ ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ಸದಸ್ಯರ ಬದಲು ಅವರ ಸಂಬಂಧಿಗಳು ಅಂದರೆ ಮಹಿಳಾ ಹಾಲಿ ಅಧ್ಯಕ್ಷರ ಮಗ, ಮಹಿಳಾ ಉಪಾಧ್ಯಕ್ಷರ ಗಂಡ, ಮಹಿಳಾ ಸದಸ್ಯರ ಆಯ, ಮಗ, ಗಂಡ ಇವರುಗಳು ಸೇರಿಕೊಂಡು ಮಹಿಳಾ ಸದಸ್ಯರನ್ನು ಮನೆಯಲ್ಲಿ ಕೂಡಿಸಿ ಇವರುಗಳೇ ಗ್ರಾಮ ಪಂಚಾಯತನಲ್ಲಿ ಅತಿ ಹೆಚ್ಚಾಗಿ ಪಂಚಾಯತ್ ನ ಸರ್ವಅಧಿಕಾರ ನಡೆಸುತ್ತಿದ್ದಾರೆ.

ಬೀದರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಗೆ ಬಂದು ನಾವು ಅಧ್ಯಕ್ಷರು , ಉಪಾಧ್ಯಕ್ಷರು , ಸದಸ್ಯರು ಇದ್ದೇವೆ ಎಂದು ಹೇಳಿಕೊಂಡು ಇ.ಓ ಮತ್ತು ಎ.ಸಿ ಅಧಿಕಾರಿಗಳಿಗೆ ಭೇಟಿ ಮಾಡಿ ಅವರ ಮೇಲೆ ರಾಜಕೀಯ ವ್ಯಕ್ತಿಗಳಿಂದ ಒತ್ತಡ ಹೇರಿಸಿ ಪಿ.ಡಿ.ಓ ರವರನ್ನು ನಮ್ಮ ಸಮ್ಮುಖದಲ್ಲಿ ಪಂಚಾಯತ ಕಛೇರಿಗೆ ಬಂದು ಚಾರ್ಜ್ ನೀಡಿ ಎಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿಸುತ್ತಿದ್ದಾರೆ.

ಈ ವಿಷಯ ಕುರಿತು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು. ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು