News Karnataka Kannada
Monday, April 29 2024
ಬೀದರ್

ಬೀದರ್: ಬಿದರಿ ಕಲೆಯೂ ವಿಶ್ವದ ಅದ್ಬುತ ಕಲೆಯಾಗಿದೆ- ಭಗವಂತ ಖೂಬಾ

Bidari art is one of the finest art forms in the world: Lord Khooba
Photo Credit : News Kannada

ಬೀದರ್: ಎಲ್ಲ ವಸ್ತುಗಳಿಗೆ ಹಣದಿಂದ ಬೆಲೆೆ ಕಟ್ಟಿದಂತೆ ಕಲೆಗೆ ಬೆಳೆಕಟ್ಟಲಾಗದು ಅದೆ ಕಲೆ ಹಾಗೂ ಕಲಾವಿದರಿಂದ ಅರಳಿದ ಬಿದರಿ ಕಲೆಯೂ ವಿಶ್ವದ ಅದ್ಬುತ ಕಲೆಯಾಗಿದ್ದು ಇದನ್ನು ಉಳಿಸಿ ಬೆಳಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ಹೇಳದರು.

ಬೀದರ ಜಿಲ್ಲೆಯಲ್ಲಿ ಹಿಂದೆ ಸುಮಾರು 1500 ಜನ ಬಿದರಿ ಕಲೆಯ ಕರ ಕುಶಲಕರ್ಮಿಗಳಿದ್ದರು ಇತ್ತೀಚೆಗೆ ಅವರ ಸಂಖ್ಯೆ ಗೌಣವಾಗಿ ಸುಮಾರು 150ಕ್ಕೆ ತಲುಪಿದೆ ಮತ್ತೆ ನಾವು ಅವರಿಗೆ ಸಹಾಯ, ಸಹಕಾರಿ ನೀಡಿ ಮತ್ತೆ ಅವರ ಸಂಖ್ಯೆ ಹೆಚ್ಚುಸುವ ಗುರಿ ಇದೆ ಎಂದು ಹೇಳಿದರು.

ಇತ್ತೀಚೆಗೆ ಜಿಲ್ಲೆಯ ಬೀದರಿ ಕಲಾವಿದರಾದ ಷಾ ಅಹ್ಮದ ಖಾದ್ರಿ ಅವರಿಗೆ ಪದ್ಮ ಶ್ರೀ ಪ್ರಶಸ್ತಿ ಇದು ನಮ್ಮ ಬೀದರ ಕ್ರೀತಿ ಹೆಚ್ಚಿಸಿದೆ ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಬಿದರಿ ಕಲಾವಿದ ಸಂಖ್ಯೆ ಹೆಚ್ಚಿಸಲು ಸಹಕಾರಿಯಾಗಲಿದೆ.ಬೀದರ ಕಲೆ ಅದ್ಬುತ ಕಲೆಯಾಗಿದೆ ಮತ್ತು ಈ ಕಲಾಕೃತಿಗಳಿಗೆ ಹೆಚ್ಚಿನ ಬೆಡಿಕೆ ಇದೆ ಆದರೆ ಮಾರುಕಟ್ಟೆಯಲ್ಲಿ ನಕಲಿ ಕಲಾಕೃತಿಗಳ ಹಾವಳಿಯಿಂದ ಇವುಗಳ ಬೆಡಿಕೆ ಕಡಿಮೆಯಾಗುತ್ತಿದೆ ಎಂದರು.

ಬಿದರಿ ಕಲೆಯ ಕುಶಲಕರ್ಮಿಗಳು ಜಂಪಲ್ ಪೋರ್ಟಲ್ ನಲ್ಲಿ ನೊಂದಣಿ ಮಾಡಿಕೊಳ್ಳಬೇಕು ಇದು ಒಳ್ಳೆಯ ಮಾರುಕಟ್ಟೆ ವೇದಿಕೆಯಾಗಿದ್ದು, ಇದರಿಂದ ನಿವು ಉತ್ತಮ ಲಾಭ ಪಡೆಯಬಹುದು. ಈಗಾಗಲೆ ಕಳೆದ ವರ್ಷ ಈ ವೇದಿಕೆ ಮೂಲಕ ಸುಮಾರು 3 ಲಕ್ಷ ಕೋಟಿ ರುಪಾಯಿಯ ವಹಿವಾಟು ಮಾಡಲಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಕೇಂದ್ರ-ರಾಜ್ಯ ಸರ್ಕಾದ ಸಹಾಕಾರ ಮೂಲಕ ಕಲಾವಿದರು ಸ್ವಾಹಲಂಭಿಯಾಗಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ಆರಂಭಿಸುತ್ತಿರುವ ವಿಶ್ವಕರ್ಮ ಕೌಶಲ್ಯ ಅಭಿವೃದ್ದಿ ಯೋಜನೆಯೂ ಯುವಕರಿಗೆ ಕಲೆಯ ತರಬೇತಿ ಅದಕ್ಕೆ ತಗಲುವ ಅಗತ್ಯ ವಸ್ತುಗಳ ಪುರೈಕೆ ಹಾಗೂ ಸಾಲ ಸೌಲಭ್ಯ ವದಗಿಸಲಿದೆ ಈ ಯೋಜನೆ ಸಹ ಬಿದರಿ ಕಲೆಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದರು.
ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಮಲ್ಲಪ್ಪ ಅಷ್ಟಗಿ ಮಾತನಾಡಿ.

ಬೀದರಿ ಕಲೆಗೆ ಸುಮಾರು 5 ಸಾವಿರ ವರ್ಷದ ಇತಹಾಸವಿದೆ ಈ ಕಲೆಯನ್ನು ನಮ್ಮ ಮುಂದಿನ ಪಿಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಎಂದ ಅವರು ಬೀದರಿ ಕಲಾವಿದರು ತಮ್ಮ ಸಮಸ್ಸೆಗಳು ನಿಗಮದ ಗಮನಕ್ಕೆ ತಂದರೆ ಸ್ಪಂದಿಸಲಾಗುವುದು ಎಂದು ಅವರು ಹೇಳಿದರು.

ಈಗಾಗಲೇ ನಿಗಮದಿಂದ ಕಚ್ಚಾ ವಸ್ತುಗಳನ್ನು ಪುರೈಸಿ ಸಿದ್ದವಸ್ತುಗಳನ್ನು ಮತ್ತೆ ಅವರಿಂದ ಪಡೆದು ಮಾರಾಟ ಮಾಡುವ ವ್ಯವಸ್ತೆ ಇದೆ. ಮುಂದೆ ಇನ್ನಷ್ಟು ಸಹಕಾರ ನಿಗಮದಿಂದ ಕುಶಲಕರ್ಮಿಗಳಿಗೆ ನೀಡಲಾಗುವುದು ಎಂದು ಅವರು ಎಂದರು.

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಐ.ಜಿ.ಪಿ ರೂಪಾ ಡಿ. ಮೌದ್ಗಿಲ್ ಮಾತನಾಡಿ, 1987 ರಲ್ಲಿ ಆರಂಭವಾದ ಡಚ್ ಅಸಿಸ್ಟಡ್ ಯೋಜನೆ ಅಡಿಯಲ್ಲಿ ಬೀದರನ ಚಿದ್ರಿ ಬಳಿಯಿರುವ ಬಿದರಿ ಕಾಲೋನಿಯಲ್ಲಿ ಮೆನೆ ಹಾಗೂ ಕಾರ್ಯಗಾರಗಳನ್ನು ನಿರ್ಮಿಸಲಾಗಿತ್ತು.

ಈಗಾಗಲೇ ವಾರಿಸುದಾದರು ಆ ಸ್ಥಳಗಳಲ್ಲಿಯೇ ವಾಸಿಸುತ್ತಿದ್ದು, ಇಲ್ಲಿಯವರೆಗೆ ಅವರು ಈ ಯೋಜನೆಯ ಅಡಿಯಲ್ಲಿ ಕಂತುಗಳ ಮೂಲಕ ಹಣೆ ಜಮೆ ಮಾಡುತ್ತಿದ್ದರು ಈಗ ಅವರು ಬಾಕಿ ಮೊತ್ತ ಪೂರ್ಣಗೊಂಡಿದ್ದು ಅವರಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಒಟ್ಟು 84 ಜನರಲ್ಲಿ 38 ಜನರಿಗೆ ಹಕ್ಕು ಪತ್ರ ನೀಡುತ್ತಿದ್ದು ಕೆಲವರ ದಾಖಲಾತಿಗಳ ಕೊರತೆಯಿಂದ ಅವರಿಗೆ ಈ ಬಾರಿ ವಿತರಿಸಲಾಗಿಲ್ಲಾ ಮುಂದೆ ಅವರಿಗೂ ಅವರು ಸುಕ್ತ ದಾಖಲಾತಿ ಒದಗಿಸಿದಲ್ಲಿ ಅವರಿಗೂ ಹಕ್ಕು ಪತ್ರ ವಿತರಿಸಲಾಗುವುದು. ರಾಜ್ಯದ 7ಜಿ.ಐ ಟ್ಯಾಗ್ ವಸ್ತುಗಳಲ್ಲಿ ಬಿದರಿ ಕಲೆ ಮೊದಲನೆ ಸ್ಥಾನದಲ್ಲಿದೆ ಮುಂದಿನ ದಿನಗಳ ಇನ್ನಷ್ಟು ಬೇಡಿಕೆ ಹೆಚ್ಚಾಗಬೇಕು ಎಂದ ಅವರು ಈಗಾಗಲೇ ಬಿದರಿ ಕಾಲೋನಿಯಲ್ಲಿ ಬಿದರಿ ಟ್ರೈನಿಂಗ್ ಸೆಂಟರ ಆರಂಭಿಸಲು ರಾಜ್ಯ ಸರ್ಕಾರದಿಂದ 1.5 ಕೋಟಿ ರೂಪಾಯಿ ಒದಗಿಸಲಾಗಿದೆ ಹಾಗೂ ಕೇಂದ್ರ ಸರ್ಕಾರದಿಂದ 2.5 ಕೋಟಿ ರೂಪಾಯಿ ಹುಡಿಕೆಯಾಗುವ ಮೂಲಕ ಆರಂಭವಾಗಲಿದೆ ಎಂದರು.

ಬೀದರ ಉತ್ತರ ಶಾಸಕ ರಹೀಮ್ ಖಾನ್ ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಯೋಜನೆಗಳು ಜಾರಿಗೆ ತರುವ ಮೂಲಕ ಬಿದರಿ ಕಲಾವಿದರಿಗೆ ಮುನ್ನೆಲೆಗೆ ತರುವ ಜವಾಬ್ದಾರಿ ನಮ್ಮ ಮೇಲಿದೆ ಮುಂದಿನ ದಿನಗಳಲ್ಲಿ ಎಲ್ಲರು ಸೇರಿ ಪ್ರಾಮಾಣಿಕ ಪ್ರಯತ್ನ ಮಾಡೊಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೀದರ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಪ್ರಭಾರ ಪ್ರಧಾನ ವ್ಯವಸ್ಥಾಪಕ ನಾಗೇಂದ್ರಪ್ಪ ಎಂ.ಎನ್, ಬೀದರ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಲಂಗೋಟಿ,ಬೀದರ ಡಿ.ಐ.ಸಿ ಜಂಟಿ ನಿರ್ದೇಶಕಿ ಸುರೇಖ ಮನೋಲಿ, ಧಾರವಾಡ ಡಿ.ಸಿ.(ಹೆಚ್) ಸಹಾಯಕ ನಿರ್ದೇಶಕಿ ದರ್ಶನ ರಾಘವನ್, ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಷಾ ರಶೀದ್ ಅಹ್ಮದ್ ಖಾದ್ರಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು