ಬೀದರ್ : ಬೀದರ್ ಜಿಲ್ಲೆಯಲ್ಲಿ ತಾಪಮಾನ ಶುಕ್ರವಾರ ಮತ್ತೆ ಏರಿಕೆಯಾಗಿದ್ದು, ಬಿಸಿಲಿಗೆ ಜನ ಸುಸ್ತಾದರು. ಗುರುವಾರ 38.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಜಿಲ್ಲೆಯಲ್ಲಿ ದಾಖಲಾಗಿತ್ತು. ಶುಕ್ರವಾರ ದಿಢೀರನೆ 42.1 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದೆ. ಉರಿ ಬಿಸಿಲು, ಝಳಕ್ಕೆ ಜನ ಸುಸ್ತು ಹೊಡೆದರು.
ಮಧ್ಯಾಹ್ನ ಬಹುತೇಕ ರಸ್ತೆಗಳು ನಿರ್ಜನವಾಗಿದ್ದವು. ಸಂಜೆ ಆರು ಗಂಟೆಯ ನಂತರವೇ ಹೊರಗೆ ಜನರ ಓಡಾಟ ಕಂಡು ಬಂತು. ಏಕಾಏಕಿ ಬಿಸಿಲು ಹೆಚ್ಚಾಗಿದ್ದು, ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೂಚಿಸಿದ್ದಾರೆ. ಕೆಲವು ಸಲಹೆಗಳನ್ನು ನೀಡಿದ್ದಾರೆ.