News Karnataka Kannada
Saturday, May 04 2024
ಬೀದರ್

ಎದೆಯ ಮೇಲೆ ಸಚಿವ ಈಶ್ವರ ಖಂಡ್ರೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

ಇಲ್ಲೊಬ್ಬ ಅಭಿಮಾನಿ ತಮ್ಮ ಎದೆಯ ಮೇಲೆ ನೆಚ್ಚಿನ ನಾಯಕರಾದ ಅರಣ್ಯ, ಪರಿಸರ ಹಾಗೂ ಜೈವಿಕ ಖಾತೆ ಸಚಿವ ಈಶ್ವರ ಖಂಡ್ರೆ ಅವರ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ.
Photo Credit : NewsKarnataka

ಬೀದರ್: ನೆಚ್ಚಿನ ರಾಜಕೀಯ ನಾಯಕ, ಸಿನಿಮಾ ನಟ-ನಟಿಯರ ಪ್ರೀತಿ, ಅಭಿಮಾನಕ್ಕಾಗಿ ಹಲವು ಅಭಿಮಾನಿಗಳು ತಮ್ಮ ಎದೆಯ ಮೇಲೆ ಅಚ್ಚೆ ಹಾಕಿಸಿಕೊಂಡ ಉದಾಹರಣೆಗಳಿವೆ. ಅಭಿಮಾನ ತೋರಿಸಿಕೊಳ್ಳಲು ಅಭಿಮಾನಿಗಳು ನಾನಾ ಕಸರತ್ತು ನಡೆಸುತ್ತಾರೆ. ಇಲ್ಲೊಬ್ಬ ಅಭಿಮಾನಿ ತಮ್ಮ ಎದೆಯ ಮೇಲೆ ನೆಚ್ಚಿನ ನಾಯಕರಾದ ಅರಣ್ಯ, ಪರಿಸರ ಹಾಗೂ ಜೈವಿಕ ಖಾತೆ ಸಚಿವ ಈಶ್ವರ ಖಂಡ್ರೆ ಅವರ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ.

ಬೀದರ್‌ ತಾಲೂಕಿನ ಕಮಠಾಣ ಶಿವಾಜಿ ಗಾಯಕವಾಡ ಎಂಬುವರು ತಮ್ಮ ಎದೆಯ ಎಡ ಭಾಗದ ಮೇಲೆ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ. ಟ್ಯಾಟೂ ಹಾಕಿಸಿಕೊಂಡ ಶಿವಾಜಿ ಗಾಯಕವಾಡ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ನಾನು ಸಚಿವ ಈಶ್ವರ ಖಂಡ್ರೆಯವರ ಅಭಿಮಾನಿ, ಅಂದಿನಿಂದ ಅವರ ಭಾವಚಿತ್ರದ ಟ್ಯಾಟೂ ಹಾಕಿಸಿಕೊಳ್ಳಬೇಕೆಂಬ ಆಸೆಯಿತ್ತು.

ಈಗ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡು ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ತೋರಿಸಿದ್ದೇನೆ. ಇಂದು ಕಮಠಾಣ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಅವರನ್ನು ಭೇಟಿಯಾಗಿ ಟ್ಯಾಟೂ ತೋರಿಸಿದ್ದೇನೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು