News Karnataka Kannada
Monday, May 13 2024
ಬೀದರ್

ಬೀದರ್​​ RFO ಮನೆಯಲ್ಲಿ ಲೋಕಾ ರೇಡ್; ಆಭರಣ, ರಿವಾಲ್ವಾರ್​​​, ಮದ್ಯದ ಬಾಟಲಿಗಳು ಪತ್ತೆ..!

Loka raid at Bidar RFO house; Huge quantity of jewellery, revolvers, liquor bottles found
Photo Credit : News Kannada

ಬೀದರ್: ಜಿಲ್ಲೆಯ RFO ಮನೆಯಲ್ಲಿ ಅಪಾರ ಪ್ರಮಾಣದ ಆಭರಣ ಪತ್ತೆಯಾಗಿದ್ದು, ರಿವಾಲ್ವಾರ್​​​, ಮದ್ಯದ ಬಾಟಲಿಗಳೂ ರೇಡ್​ ವೇಳೆ ಪತ್ತೆಯಾಗಿವೆ. ಕಲಬುರಗಿಯಲ್ಲಿರುವ ಬಸವರಾಜ್ ಡಾಂಗೆ ಮನೆಯಲ್ಲಿ ಪತ್ತೆ ನಡೆದಿದ್ದು, ಬಸವರಾಜ್ ಡಾಂಗೆ ಅವರು ಬೀದರ್​​ ವಲಯ ಅರಣ್ಯಾಧಿಕಾರಿಯಾಗಿದ್ದಾರೆ.

ಕೋಟಿ-ಕೋಟಿ ಬೆಲೆ ಬಾಳುವ ಆಸ್ತಿ ಸಂಬಂಧದ ದಾಖಲೆಗಳನ್ನು ಲೋಕಾ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಮಾಕಾ ಲೇಔಟ್​ನಲ್ಲಿ ಕೋಟಿ ಬೆಲೆ ಬಾಳು ಎರಡು ಅಂತಸ್ತಿನ ಬಂಗಲೆ ಇದೆ.

ವಿಜಯಪುರ ಜಿಲ್ಲೆ ನಾಗರಹಳ್ಳಿಯಲ್ಲಿ 7 ಎಕರೆ ನೀರಾವರಿ ಜಮೀನು, 300 ಗ್ರಾಂಗೂ ಹೆಚ್ಚು ಚಿನ್ನದ ಆಭರಣ, ಬೆಳ್ಳಿ ಆಭರಣ ಪತ್ತೆಯಾಗಿದೆ. ಕಾಳಗಿ ತಾಲೂಕಿನಲ್ಲಿ ಒಂದೂವರೆ ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆ, ಬೇನಾಮಿ ಹೆಸರಿನಲ್ಲಿ ಕಾರ್ ಸೇರಿ ಹಲವು ವಾಹನಗಳು ಲೋಕಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದೇ ವೇಳೆ ಪರವಾನಗಿ ಹೊಂದಿರುವ ಒಂದು ರಿವಾಲ್ವಾರ್ ಪತ್ತೆಯಾಗಿದೆ. ಬಸವರಾಜ್​ ಡಾಂಗೆ ಮನೆ ಲೋಕಾ ಟೀಂ ಪರಿಶೀಲನೆ ಮಾಡುತ್ತಿದೆ.

ವರದಿ:ಯೋಹಾನ್ ಪಿ ಹೊನ್ನಡ್ಡಿ ಬೀದರ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು