News Karnataka Kannada
Friday, May 03 2024
ಬೀದರ್

ಪಿಯು ಕಿರು ಪರೀಕ್ಷೆ ಅಂಕ ಗಡುವಿನೊಳಗೆ ದಾಖಲಿಸಲು ಡಿಡಿಪಿಯು ಸೂಚನೆ

DDPU instructs to register PU short test mark within deadline
Photo Credit : News Kannada

ಬೀದರ್: ‘ಪ್ರಸಕ್ತ ಸಾಲಿನ ಪ್ರಥಮ, ದ್ವಿತೀಯ ಪಿಯು ವಿದ್ಯಾರ್ಥಿಗಳ ಪ್ರಥಮ ಕಿರು ಪರೀಕ್ಷೆ ಅಂಕಗಳನ್ನು ಸ್ಯಾಟ್ಸ್‍ ವೆಬ್‌ಸೈಟಿನಲ್ಲಿ ನಿಗದಿತ ಅವಧಿಯಲ್ಲಿ ದಾಖಲಿಸಬೇಕು’ ಎಂದು ಬೀದರ್‌ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್ ತಿಳಿಸಿದರು.

ನಗರದ ಜ್ಞಾನಸುಧಾ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ಜಿಲ್ಲೆಯ ಪಿಯು ಕಾಲೇಜುಗಳ ಪ್ರಾಂಶುಪಾಲರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಸಾಲಿನಿಂದ ಪ್ರಾಯೋಗಿಕೇತರ (ನಾನ್ ಪ್ರ್ಯಾಕ್ಟಿಕಲ್‌) ವಿಷಯಗಳಿಗೆ 10 ಅಂಕಗಳು ಮತ್ತು ಪ್ರಾಜೆಕ್ಟ್‌ ಮತ್ತು ಅಸೈನ್‍ಮೆಂಟ್‍ಗಾಗಿ 10 ಅಂಕಗಳನ್ನು ಕಾದಿರಿಸಲಾಗಿದೆ. ಅದರಲ್ಲಿ 10 ಅಂಕಗಳು ಪ್ರಥಮ/ದ್ವಿತೀಯ ಕಿರು ಪರೀಕ್ಷೆ ಮತ್ತು ಅರ್ಧವಾರ್ಷಿಕ ಥಿಯರಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಅನುಪಾತಕ್ಕೆ ಅನುಗುಣವಾಗಿ ನೀಡಲಾಗುತ್ತದೆ. ಉಳಿದ 10 ಅಂಕಗಳು ಪ್ರಾಜೆಕ್ಟ್‌ ಮತ್ತು ಅಸೈನ್‍ಮೆಂಟ್‍ಗೆ ಕೊಡಲಾಗುತ್ತದೆ ಎಂದರು.

ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಶ ಅಕ್ಕಣ್ಣ, ಪ್ರ.ಕಾರ್ಯದರ್ಶಿ ಮನ್ಮಥ ಡೋಲೆ, ನೋಡಲ್ ಅಧಿಕಾರಿ ಚಂದ್ರಕಾಂತ ಗಂಗಶೆಟ್ಟಿ, ಪ್ರಾಚಾರ್ಯರ ಸಂಘದ ಉಪಾಧ್ಯಕ್ಷ ಅಶೋಕ ರಾಜೋಳೆ, ರಾಜ್ಯ ಪ್ರತಿನಿಧಿ ಪ್ರಭು, ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು