ಬೀದರ್: ರಾಜ್ಯ ಸೇರಿದಂತೆ ಹೊರ ರಾಜ್ಯದಲ್ಲಿ ಡಕಾಯಿತಿ ಮಾಡುತ್ತಿದ್ದ ಖತರ್ನಾಕ್ಕಳ್ಳನನ್ನು ಬೀದರ್ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯು ಒಟ್ಟು 20 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಗಾಂಧಿ ಗಂಜ್ ಠಾಣೆಯ ಎರಡು ಪ್ರಕರಣಗಳನ್ನು ಭೇಧಿಸಿ ತನಿಖೆ ಮುಂದುವರಿಸಿದ್ದಾರೆ.
ಆರೋಪಿಯಿಂದ ಎರಡು ಕ್ಯಾಮೆರಾ, 10 ಗ್ರಾಂ ಬಂಗಾರದ ಚೈನ್, ಹಾಗೂ 2,000 ನಗದು ಸೇರಿದಂತೆ ಒಟ್ಟು 1.43 ಲಕ್ಷ ಮೌಲ್ಯದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
ಆರೋಪಿಯು ತಾಂಡೂರ, ಹೈದ್ರಾಬಾದ್, ಕಲಬುರಗಿ ನಗರಗಳಲ್ಲಿ ಒಟ್ಟು 20 ಸುಲಿಗೆ ಪ್ರಕರಣಗಳನ್ನು ಭಾಗಿಯಾಗಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಸ್.ಪಿ ಚನ್ನಬಸವಣ್ಣ ಲಂಗೋಟಿ ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ನೀಡಿದ್ದಾರೆ.