News Karnataka Kannada
Sunday, May 05 2024
ಬೀದರ್

ಬೀದರ್: ಆಲಿಕಲ್ಲು ಮಳೆಯಿಂದಾಗಿ ಹಾನಿಗೊಳಗಾದ ರೈತರ ಹೊಲಗಳಿಗೆ ಶೈಲೇಂದ್ರ ಬೆಲ್ದಾಳೆ ಭೇಟಿ

Shailendra Beldale visits farmers' fields damaged due to hailstorm
Photo Credit : News Kannada

ಬೀದರ್: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಆಲಿಕಲ್ಲು ಮಳೆಯಿಂದಾಗಿ ಜಿಲ್ಲೆಯ ಅನೇಕ ಗ್ರಾಮಗಳ ಹೊಲಗಳಲ್ಲಿನ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು ರೈತರು ದಿಕ್ಕು ತೋಚದೇ ಕಂಗಾಲಾಗಿದ್ದಾರೆ.

ಬೀದರ್ ದಕ್ಷಿಣ ಕ್ಷೇತ್ರದ ಮಲ್ಕಾಪೂರ, ಸುಲ್ತಾನಪೂರ ಗ್ರಾಮದ ಅನೇಕ ಹೊಲಗಳು ಹೆಚ್ಚು ಹಾನಿಗೊಳಗಾಗಿದ್ದು ಕೆ ಎಸ್ ಐ ಐ ಡಿ ಸಿ ಅಧ್ಯಕ್ಷರಾದ ಡಾ ಶೈಲೇಂದ್ರ ಬೆಲ್ದಾಳೆ ಹಾನಿಗೊಳಗಾದ ರೈತರ ಹೊಲಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಜೊಳ,ಕಡಲೆ, ಕಲ್ಲಂಗಡಿ, ಈರುಳ್ಳಿ,ಹೂ ಕೋಸು ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದನ್ನು ರೈತರಿಂದ ಮಾಹಿತಿ ಪಡೆದು ಪರಿಶೀಲಿಸಿದರು ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಹಾನಿಗೊಳಗಾದ ರೈತರ ಹೊಲಗಳನ್ನು ಸಂಪೂರ್ಣ ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡುವುದಾಗಿ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ತಾವು ಕೂಡ ಈ ವಿಷಯ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ರೈತರ ಪರಿಶ್ರಮದಿಂದ ಬೆಳೆದ ಬೆಳೆಗಳು ಕೈಗೆ ಬರುವ ಸಮಯದಲ್ಲಿ ಪ್ರಕೃತಿ ವಿಕೋಪಕ್ಕೆ ಹಾನಿಯಾಗಿದ್ದು ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈಗಾಗಲೇ ಸುಲ್ತಾನಪೂರ ,ಮಲ್ಕಾಪೂರ ಗ್ರಾಮದ ಹಲವು ಹೊಲಗಳಿಗೆ ಭೇಟಿ ನೀಡಿದ್ದೇನೆ ಸಂಪೂರ್ಣ ಬೆಳೆಗಳು ಹಾನಿಯಾಗಿದ್ದು ಈ ಬಗ್ಗೆ ಕೂಡಲೇ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ದೇಶದ ಬೆನ್ನೆಲುಬಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ತಾಲ್ಲೂಕು ಅಧಿಕಾರಿಗಳು ಸೇರಿದಂತೆ, ಪ್ರಮುಖರಾದ.ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ಗೌರಶೆಟ್ಟಿ, ಬಸವರಾಜ ಹಿಲಾಲಪೂರ, ಸ್ಥಳೀಯರಾದ ಶಿವು ಸುಲ್ತಾನಪೂರೆ ,ಸಂಗಯ್ಯ ಸ್ವಾಮಿ, ಬಸವರಾಜ ಹೆಡ್ಡಿ,ಅನೀಲ್, ಮೇಲ್ದೊಡ್ಡಿ, ಮಲ್ಲಿಕಾರ್ಜುನ್ ಪಾಟೀಲ್ ,ಆನಂದ್ ಚಿಟ್ಟಾ ಸಂಜು ಹೆಡೆ, ಸಾಯಿನಾಥ್ ಗೌಸ್, ಸಿದ್ದು ಬರಿದಾಬಾದೆ,ಸುಧಾಕಾರ್ ಶಣಗೊಂಡ, ಶಿವರಾಜ್ ಬರಿದಾಬಾದೆ, ಸಂಗಪ್ಪ, ಪಂಡಿತ್ ಮಾಲೆಗಾಂವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು