News Karnataka Kannada
Sunday, May 05 2024
ಬೀದರ್

ಬೀದರ್- ಏರ್ ಕಾಮಾಡೋರ್ ಅಭಿಜಿತ್ ನೇನೆ ಅಧಿಕಾರ ಸ್ವೀಕಾರ

Bidar- Air Commodore Abhijit Nene takes charge
Photo Credit : News Kannada

ಬೀದರ್: ಏರ್ ಕಾಮಾಡೋರ ಅಭಿಜಿತ್ ನೇನೆ ಅವರು ಭಾರತೀಯ ವಾಯು ಸೇನೆ ಯ ಬೀದರ್ ನೆಲೆಯ ಏರ್ ಆಫೀಸರ್ ಕಮಾಂಡಿಂಗ ಆಗಿ ಬುಧವಾರ ಫೆಬ್ರುವರಿ 1 ರಂದು ಅಧಿಕಾರ ಸ್ವೀಕಾರ ಮಾಡಿದರು.

ನಿರ್ಗಮಿತ ಏರ್ ಕಾಮಾಡೋರ ಸಮೀರ್ ಸೋಂಧಿ ಅವರು ತಮ್ಮ ಕಾರ್ಯಾಲಯ ದಲ್ಲಿ ಅಭಿಜಿತ್ ನೇನೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಏರ್ ಕಾಮಾಡೋರ ಅಭಿಜಿತ್ ನೇನೆ ಅವರು ವಾಯು ಸೇನೆ ಯಲ್ಲಿ ಯುದ್ಧ ವಿಮಾನ ಪೈಲಟ್ ಆಗಿ 1993, ಜೂನ್ 21 ರಂದು ಸೇರ್ಪಡೆ ಯಾದರು.

ಅವರು ಕ್ಯಾಟ ಎ ಶೈಕ್ಷಣಿಕ ಅರ್ಹತೆ ಹೊಂದಿರುವ ವಿಮಾನ ಹಾರಾಟ ತರಬೇತುದಾರ ರಾಗಿದ್ದಾರೆ. ಅವರಿಗೆ 5000 ಗಂಟೆ ಗಳಿಗೂ ಹೆಚ್ಚು ವಿಮಾನ ಹಾರಾಟದ ಅನುಭವ ಇದೆ. ಅವರು ಜಾಗವಾರ, ಹಂಟರ್, ಏಸ ಉ -30, ಕಿರಣ್ ಹಾಗೂ ಎಚ ಪಿ ಟಿ 32 ವಿಮಾನ ಗಳನ್ನು ಹಾರಾಟ ಮಾಡಿದ ಅನುಭವ ಇದೆ.

ಅವರು ತಮ್ಮ ತರಬೇತಿ ಯನ್ನು ಪ್ರತಿಷ್ಟಿತ ಸಂಸ್ಥೆ ಗಳಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಮಲೇಶಿಯ ದ ಕೌಲ ಲಂಪುರ್ ದ ಶಾಸ್ತ್ರ ಸಜ್ಜಿತ ಸಿಬ್ಬಂದಿ ತರಬೇತಿ ಕಾಲೇಜ್, ಹಾಗೂ ಮಧ್ಯ ಪ್ರದೇಶದ ಯುದ್ಧ ಕಾಲಿನ ಮಿಲಿಟರಿ ಮುಖ್ಯಸ್ಥಾನ (ಮಹೋವು) ನಲ್ಲಿರುವ ಸೇನಾ ಯುದ್ಧ ತರಬೇತಿ ಕಾಲೇಜು ಗಳಲ್ಲಿ ಪೂರೈಸಿದ್ದಾರೆ.

ಬೀದರ್ ಗೆ ಬರುವ ಮೊದಲು ಇವರು ವಾಯು ಸೇನಾ ತರಬೇತು ದಾರರ ಶಾಲೆ, ಯುದ್ಧ ತಂತ್ರ ಹಾಗೂ ವಾಯು ಸೇನಾ ಯುದ್ಧ ಕಲೆ ಸಂಶೋಧನಾ ಸಂಸ್ಥೆ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಇವರು ಜಾಗವಾರ ತಂಡ ಹಾಗೂ ಸಿಗ್ನಲ್ ತಂಡ ಗಯಳಯಾ ಮುಖ್ಯಸ್ಥ ರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಅಮೂಲ್ಯ ಸೇವೆ ಗಾಗಿ ಅವರಿಗೆ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು