ಬೀದರ್: ಜೀಪ್ ಮತ್ತು ಆಟೋ ನಡುವೆ ಅಪಘಾತ ಸಂಭವಿಸಿದ್ದು 7 ಮಂದಿ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಬೇಮಳಖೇಡಾ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಗಳು, ಚಿಟಗುಪ್ಪ ತಾಲೂಕಿನ ಉಡಮನಹಳ್ಳಿ ಗ್ರಾಮದ ಪ್ರಭಾವತಿ ದೇವಂದ್ರ (36), ಯಾದಮ್ಮ ಅಮೃತ (40), ಗುಂಡಮ್ಮ ನರಸಿಂಗ (60), ಜಗಮ್ಮ ಪ್ರಭು (34), ರುಕ್ಮಿಣಿ ಅಮೃತ (60) ನಿನ್ನೆ ರಾತ್ರಿ ಮೃತಪಟ್ಟಿದ್ದರು. ಇಂದು ಬೆಳಗ್ಗೆ ಮತ್ತೆ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಮೃತರೆಲ್ಲರು ನೆರೆಯ ತೆಲಂಗಾಣ ಗ್ರಾಮದ ಹೊಲದಲ್ಲಿ ಸೋಯಾರಾಶಿ ಮಾಡಿ ಹಿಂತಿರುಗಿ ಬರುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ.