ಬಳ್ಳಾರಿ : ವಿಮ್ಸ್ ವೈದ್ಯಕೀಯ ಕಾಲೇಜಿನ 21 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಕೊರೊನಾ-19 ದೃಢಪಟ್ಟಿದೆ. ಬಳ್ಳಾರಿಯ ವಿಮ್ಸ್ (VIMS) ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ನಲ್ಲಿ 250 ವಿದ್ಯಾರ್ಥಿಗಳಿದ್ದು, ಓಮಿಕ್ರಾನ್, ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಇದರಲ್ಲಿ 21 ಜನರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಸದ್ಯ ಸೋಂಕಿತ ವಿದ್ಯಾರ್ಥಿಗಳನ್ನು (Students) ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಹಾಸ್ಟೆಲ್ನಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ರ್ಯಾಂಡಮ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ ಎಂದು ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ತಿಳಿಸಿದ್ದಾರೆ.
#Justin 21 staff and students of #VIMS hospital in #Ballari have tested positive for Covid19 Quarantine under progress, reporte @KiranTNIE1 @santwana99 @ramupatil_TNIE @NewIndianXpress @XpressBengaluru @KannadaPrabha @NammaKalyana @BellaryNamma @Streets_ballari @Bellarymerijaan
— Amit Upadhye (@Amitsen_TNIE) January 5, 2022