News Karnataka Kannada
Thursday, May 02 2024
ಬಳ್ಳಾರಿ

ವಿಜಯನಗರ ಜಿಲ್ಲೆ ಉದಯಕ್ಕೆ ಆನಂದ್ ಸಿಂಗ್ ಪಾತ್ರ ಬಹು ಮುಖ್ಯ : ಬಿಎಸ್ ವೈ

Vijayanagara: I have been reduced to 'Utsava Murthy', says Anand Singh
Photo Credit :
ಹೊಸಪೇಟೆ :  ತಮ್ಮ ರಾಜಕೀಯ ಬದುಕನ್ನು ಪಣಕ್ಕಿಟ್ಟು ಹೋರಾಟ ನಡೆಸಿದ ಆನಂದಸಿಂಗ್‌ ಅವರು ವಿಜಯನಗರ ಜಿಲ್ಲೆಯ ಉದಯಕ್ಕೆ ಕಾರಣರಾಗಿದ್ದಾರೆ. ಅವರ ಬದ್ಧತೆಯ ಫಲವಾಗಿ ಹೊಸ ಜಿಲ್ಲೆಯ ಬಗೆಗಿನ ಅವರ ಕನಸು ಕೊನೆಗೂ ನನಸಾಗಿದೆ. ಸಿಂಗ್‌ರ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ  ಬಣ್ಣಿಸಿದರು.

ವಿಜಯನಗರ -ಬಳ್ಳಾರಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಜಯನಗರ ಜಿಲ್ಲೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ವಿಜಯನಗರ ಜಿಲ್ಲೆಗಾಗಿ ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಆನಂದಸಿಂಗ್‌ ಅವರು ವಿಜಯನಗರ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕು ಎಂಬ ಕನಸು ಕಂಡವರು. ಹೀಗಾಗಿಯೇ ಛಲ ಬಿಡದೆ ಹೋರಾಟ ನಡೆಸಿ, ಕೊನೆಗೂ ಹೊಸ ಜಿಲ್ಲೆಯ ಅಸ್ತಿತ್ವಕ್ಕೆ ಕಾರಣರಾಗಿದ್ದಾರೆ ಎಂದರಲ್ಲದೆ, ಜಿಲ್ಲೆಯ ವಿಭಜನೆಯಿಂದ ಆಡಳಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಹೆಚ್ಚು ಅನುಕೂಲವಾಗಲಿದೆ.

ವಿಜಯನಗರ ಜಿಲ್ಲೆ ವೈಭವದ ಐತಿಹ್ಯ ಹೊಂದಿದ್ದು, ಆರು ತಾಲೂಕುಗಳನ್ನು ಹೊಂದಿರುವ ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಹೊಸ ಜಿಲ್ಲೆ ಹಲವು ವೈವಿಧ್ಯತೆಯಿಂದ ಕೂಡಿದೆ. ಇಡೀ ನಾಡಿಗೆ ಅನ್ನ ನೀಡುವ ತುಂಗಭದ್ರೆಯ ಕೃಪೆ, ಸಮೃದ್ಧವಾದ ನೀರಾವರಿ ಪ್ರದೇಶ, ಸಂಪತ್‌ಭರಿತ ನೈಸರ್ಗಿಕ ಸಂಪತ್ತು, ಹಂಪಿಯ ಶ್ರೀ ವಿರುಪಾಕ್ಷದೇವರ ಕೃಪಾಶೀರ್ವಾದದ ಹಿನ್ನೆಲೆ ಈ ಜಿಲ್ಲೆಗಿದೆ.

ಹೊಸ ಜಿಲ್ಲೆಯ ಪ್ರಗತಿಗಾಗಿ ಈಗಾಗಲೇ ಸಾವಿರಾರು ಕೋಟಿ ರು.ಗಳ ಅನುದಾನವನ್ನು ತಂದಿರುವ ಆನಂದಸಿಂಗ್‌ ಅವರು ನೂತನ ವಿಜಯನಗರವನ್ನು ಇಡೀ ರಾಜ್ಯದಲ್ಲಿ ಮಾದರಿಯನ್ನಾಗಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ಸರ್ಕಾರದ ಎಲ್ಲ ಸಚಿವರು ಈ ಜಿಲ್ಲೆಯ ಪ್ರಗತಿಗೆ ಕೈ ಜೋಡಿಸಲಿದ್ದಾರೆ ಎಂದು ಬಿಎಸ್‌ವೈ ತಿಳಿಸಿದರು.

ಉಜ್ಜಯಿನಿಯ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಡಾ. ಸಂಗನಬಸವಸ್ವಾಮಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು