News Karnataka Kannada
Monday, April 29 2024
ಬಳ್ಳಾರಿ

ಮುಖ್ಯ ಮಂತ್ರಿಗಳು ಬಳ್ಳಾರಿಗೆ ಬಂದರೂ ಭೇಟಿ ಮಾಡದ ಸಚಿವ ಆನಂದ್ ಸಿಂಗ್

Anand Singh Minister
Photo Credit :

ಮುಖ್ಯ ಮಂತ್ರಿಗಳು ಬಳ್ಳಾರಿಗೆ ಬಂದರೂ ಭೇಟಿ ಮಾಡದ ಸಚಿವ ಆನಂದ್ ಸಿಂಗ್
ಬೆಂಗಳೂರು, ; ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದರೂ ಕೂಡ ಸಿಎಂ ಭೇಟಿಗೆ ಸಚಿವ ಆನಂದ್ ಸಿಂಗ್ ಮುಂದಾಗಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಲಮಟ್ಟಿಗೆ ಬಾಗಿನ ಅರ್ಪಿಸುವ ಸಲುವಾಗಿ ಜಿಂದಾಲ್‍ಗೆ ಭೇಟಿ ನೀಡಿದ್ದರು. ನಂತರ ಹೆಲಿಕಾಪ್ಟರ್ ಮೂಲಕ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ತೆರಳಿದರು.
ನಿನ್ನೆ ಸಂಜೆಯಷ್ಟೇ ಹೊಸಪೇಟೆಗೆ ಬಂದಳಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಸಚಿವ ಆನಂದ್ ಸಿಂಗ್ ಸ್ವಾಗತಿಸಿದ್ದರು. ಆದರೆ, ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಂದಾಲ್‍ಗೆ ಭೇಟಿ ನೀಡಿದರೂ ಸಹ ಸೌಜನ್ಯಕ್ಕಾದರೂ ಅವರನ್ನು ಭೇಟಿ ಮಾಡುವ ಗೋಜಿಗೆ ಹೋಗಿಲ್ಲ.
ಕಳೆದ ಎರಡು ದಿನಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಗೂ ಕೂಡ ಆನಂದ ಸಿಂಗ್ ಗೈರಾಗಿದ್ದರು. ಪ್ರಭಾವಿ ಖಾತೆ ಸಿಗದಿರುವುದಕ್ಕೆ ಅನಂದ್ ಸಿಂಗ್ ಮುನಿಸುಕೊಂಡಿದ್ದು, ಅದು ಇನ್ನೂ ಶಮನವಾಗಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು