News Karnataka Kannada
Saturday, May 18 2024
ಬಳ್ಳಾರಿ

ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರಕ್ಕೆ ನಮ್ಮ ವಿರೋಧವಿಲ್ಲ: ಮಾಜಿ ಸಚಿವ ಯುಟಿ.ಖಾದರ್

Bellare Praveen Kumar murder case: Culprits to be arrested soon : U.T. Khader
Photo Credit :

 ಬಳ್ಳಾರಿ : ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರಕ್ಕೆ ನಮ್ಮ ವಿರೋಧವಿಲ್ಲ, ಎಲ್ಲಾ ಧರ್ಮಗಳನ್ನೂ ನಾವು ಸಮಾನವಾಗಿ ಗೌರವಿಸುತ್ತೇವೆ ಎಂದು ಮಾಜಿ ಸಚಿವ ಯುಟಿ.ಖಾದರ್ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾದರ್‌, ಭಗವದ್ಗೀತೆಯ ಮೌಲ್ಯಗಳು ಜನರ ಹೃದಯ ಸ್ವಚ್ಛಗೊಳಿಸುತ್ತದೆ. ಅದರಂತೆ ಕುರಾನ್, ಬೈಬಲ್ ಸೇರಿದಂತೆ ಎಲ್ಲ ಧರ್ಮದವರ ಗ್ರಂಥಗಳ ಬಗ್ಗೆ ಮಕ್ಕಳಿಗೆ ಪರಿಚಯವಾಗಲಿ ಎಂಬುದು ನಮ್ಮ ಒತ್ತಾಯ. ಮಹಾನ್ ವ್ಯಕ್ತಿಗಳಾದ ಶ್ರಿ ಬಸವಣ್ಣನವರ ಸಾಹಿತ್ಯ, ವಚನಗಳು, ಗ್ರಂಥಗಳ ಬಗ್ಗೆ ಹಾಗೂ ಕೋಟೆ ಚೆನ್ನಯ್ಯ ಅವರ ವ್ಯಕ್ತಿತ್ವವೂ ಮಕ್ಕಳಿಗೆ ಪರಿಚಯವಾಗಲಿ. ಆದರೆ ಯುವಜನರು, ವಿದ್ಯಾರ್ಥಿಗಳಲ್ಲಿ ಕೋಮುಭಾವನೆ ಬೆಳೆಯದಂತೆ ಎಚ್ಚರ ವಹಿಸಬೇಕು ಎಂದರು.

ಹಿಜಾಬ್ ವಿಚಾರವನ್ನು ಅನಗತ್ಯವಾಗಿ ಚರ್ಚೆಗೆಳೆದು ತರಲಾಗಿದೆ. ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಒಟ್ಟು 83 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ಮಾತ್ರವೇ ಹಿಜಾಬ್ ಗೆ ಒತ್ತಾಯಿಸಿದ್ದರು. ಕೆಲವರು ಅದನ್ನೇ ದೊಡ್ಡ ರಾದ್ದಾಂತ ಮಾಡಿದರು. ಮಕ್ಕಳಲ್ಲಿನ ಕೋಮು ಸೌಹಾರ್ದಕ್ಕೆ ದಕ್ಕೆಯುಂಟುಮಾಡಬಾರದು. ಈ ರೀತಿ ಮಾಡಿದರೆ ಮಕ್ಕಳ‌ ಹಾಗೂ ದೇಶದ ಭವಿಷ್ಯಕ್ಕೆ ಮಾರಕವಾಗಲಿದೆ ಎಂದರು.

ಬಳ್ಳಾರಿ ನಗರದ ಮಹಾ ಜನತೆ ಆರ್ಶಿವಾದದಿಂದ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ದೊರೆತಿದ್ದು, ಪಾಲಿಕೆ ಚುಕ್ಕಾಣಿ ಹಿಡಿದಿದೆ. ಮೇಯರ್ ಆಗಿ ರಾಜೇಶ್ವರಿ ಸುಬ್ಬರಾಯಡು ಹಾಗೂ ಉಪ‌ಮೇಯರ್ ಮಾಲಾನ್ ಬೀ ಅವರು ಆಯ್ಕೆಯಾಗಿದ್ದು, ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಹ್ಮದ್ ರಫೀಕ್, ಚುನಾವಣಾ ವೀಕ್ಷಕರಾದ ಚಂದ್ರಪ್ಪ, ಮಂಜುನಾಥ್ ಮತ್ತಿತರರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು