ಕಲಬುರಗಿ : ವಾಡಿ ಪಟ್ಟಣದಲ್ಲಿ ಗುಂಡು ಹಾರಿಸಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಭೀಕರ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಬಲರಾಮ್ ಚೌಕ್ ಬಳಿ ನಡೆದಿದೆ.
ಭಾಯ್ ಭಾಯ್ ಗ್ರೂಪ್ ಮುಖಂಡ ಇರ್ಫಾನ್ (42) ಹತ್ಯೆಗಿಡಾದ ವ್ಯಕ್ತಿ. ಬೈಕ್ ಅಡ್ಡಗಟ್ಟಿ ಪಟ್ಟಣದ ಸೇವಲಾಲ್ ಮಂದಿರದ ಬಳಿ ಹತ್ಯೆ ಮಾಡಲಾಗಿದೆ. ಇರ್ಫಾನ್‌ಗೆ ಗುಂಡಿಕ್ಕಿ ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.
ಹಳೆ ವೈಷಮ್ಯ ಹಿನ್ನಲೆಯಲ್ಲಿ ಇರ್ಫಾನ್‌ನನ್ನ ಹತ್ಯೆಗೈಯ್ದಿರೋ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

