ಹಾವೇರಿ: ನಿರಂತರ ಮಳೆಯಿಂದಾಗಿ ಮನೆ ಕುಸಿದು ಅವಳಿ ಮಕ್ಕಳು ಹಾಗೂ ಮಹಿಳೆ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಸವಣೂರಿನ ಮಾದಾಪುರದಲ್ಲಿ ನಡೆದಿದೆ.
ಒಂದೂವರೆ ವರ್ಷದ ಅಮೂಲ್ಯ, ಅನನ್ಯ ಹಾಗೂ ಚನ್ನಮ್ಮ (30) ಮೃತಪಟ್ಟ ದುರ್ದೈವಿಗಳು. ಕುಟುಂಬದ ಯಲ್ಲವ್ವ, ಮುತ್ತು ಹರಕೂನಿ, ಸುನೀತಾ ಎಂಬುವರಿಗೆ ಗಂಭೀರ ಗಾಯಗಳು ಆಗಿವೆ. ನಿರಂತರ ಮಳೆಯಿಂದ ಮನೆ ನೆನೆದು ಹೋಗಿತ್ತು. ಏಕಾಏಕಿ ಮನೆ ಕುಸಿದಿದ್ದರಿಂದ ಮನೆಯಲ್ಲಿದ್ದ 6 ಜನರ ಪೈಕಿ ಎರಡು ಮಕ್ಕಳು ಹಾಗೂ ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

