ಹಾವೇರಿ: ಡೆಂಗ್ಯೂ ಜ್ವರಕ್ಕೆ 9 ವರ್ಷದ ಮಗು ಬಲಿಯಾಗಿರುವ ಘಟನೆ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ನಡೆದಿದೆ.

ದ್ಯಾಮಪ್ಪ ಬನ್ನಿಹಟ್ಟಿ ಎಂಬುವವರ ಪುತ್ರಿ ದಿವ್ಯ ದ್ಯಾಮಪ್ಪ ಮೃತ ಮಗು. ಕಳೆದ 12 ದಿನಗಳ ಹಿಂದೆ ಜ್ವರದಿಂದ ಬಳುತ್ತಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮಗು ಕೊನೆಯುಸಿರೆಳೆದಿದೆ.

ನಿನ್ನೆ 899 ಮಂದಿಗೆ ಡೆಂಗ್ಯೂ ಟೆಸ್ಟ್‌ ನಡೆಸಲಾಗಿದೆ.ಈ ಪೈಕಿ 155 ಮಂದಿಗೆ ಸೋಂಕು ದೃಢವಾಗಿತ್ತು. ಬೆಂಗಳೂರಿನಲ್ಲಿ 107, ಚಿತ್ರದುರ್ಗ 10, ದಾವಣಗೆರೆ 4, ಶಿವಮೊಗ್ಗ 9, ಉತ್ತರ ಕನ್ನಡ 2, ವಿಜಯನಗರ 4, ಹಾಸನ 16 ಉಡುಪಿಯಲ್ಲಿ 3 ಕೇಸ್‌ಗಳು ಪತ್ತೆಯಾಗಿದ್ದವು. 343 ಸಕ್ರಿಯ ಪ್ರಕರಣಗಳ ಪೈಕಿ 142 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.