News Karnataka Kannada
Sunday, May 05 2024
ಕರ್ನಾಟಕ

ಕ್ಲಿನಿಕ್​ಗೆ ಹೋಗುವ ಮುನ್ನ ಇರಲಿ ಎಚ್ಚರ: ರಾಜ್ಯದಲ್ಲಿ ಹೆಚ್ಚಿದ ನಕಲಿ ವೈದ್ಯರು

ಕೊವೀಡ್ ಬಳಿಕ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟವಾಗಿ ಅನೇಕರು ನಾನಾ ಮಾರ್ಗಗಳನ್ನು ಹಿಡಿದಿದ್ದಾರೆ. ಇದೇ ನಿಟ್ಟಿನಲ್ಲಿ ಎಂಬಿಬಿಎಸ್ ಪಾಸ್ ಆಗದಿದ್ದರೂ ಅದೆಷ್ಟೋ ಮಂದಿ ಕೊರೊನಾ ಬಳಿಕ ಕ್ಲಿನಿಕ್ ಓಪನ್ ಮಾಡಿ ಚಿಕಿತ್ಸೆ ಕೊಟ್ಟು ಅಪಾಯ ತಂದುಕೊಂಡಿದ್ದಾರೆ.
Photo Credit : News Kannada

ಬೆಂಗಳೂರು: ಕೊವೀಡ್ ಬಳಿಕ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟವಾಗಿ ಅನೇಕರು ನಾನಾ ಮಾರ್ಗಗಳನ್ನು ಹಿಡಿದಿದ್ದಾರೆ. ಇದೇ ನಿಟ್ಟಿನಲ್ಲಿ ಎಂಬಿಬಿಎಸ್ ಪಾಸ್ ಆಗದಿದ್ದರೂ ಅದೆಷ್ಟೋ ಮಂದಿ ಕೊರೊನಾ ಬಳಿಕ ಕ್ಲಿನಿಕ್ ಓಪನ್ ಮಾಡಿ ಚಿಕಿತ್ಸೆ ಕೊಟ್ಟು ಅಪಾಯ ತಂದುಕೊಂಡಿರುವ ಬಗ್ಗೆ ಈ ಹಿಂದಿನಿಂದಲೂ ಅನೇಕ ವರದಿಗಳು ಇವೆ.

ಇದೀಗ ನಕಲಿ ವೈದ್ಯರು ಹಾಗೂ ನಕಲಿ ಕ್ಲಿನಿಕ್​ಗಳ ಬಗ್ಗೆ ದೂರುಗಳು ಬರುತ್ತಿದ್ದು ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಸದ್ಯ 1434ಕ್ಕೂ ಹೆಚ್ಚು ನಕಲಿ ವೈದ್ಯರ ಮೇಲೆ ಕೇಸ್ ದಾಖಲಾಗಿದೆ.

ಈ ಬಗ್ಗೆ ಆರೋಗ್ಯ ಇಲಾಖೆಗೆ ದೂರುಗಳ ಸುರಿಮಳೆಯಾಗಿದ್ದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಸಮರ ಸಾರಿದೆ. ಸದ್ಯ 1434ಕ್ಕೂ ಹೆಚ್ಚು ನಕಲಿ ವೈದ್ಯರ ಮೇಲೆ ಆರೋಗ್ಯ ಇಲಾಖೆ ಕೇಸ್ ದಾಖಲಿಸಿದೆ. ಈ ನಕಲಿ ವೈದ್ಯರು ಗಡಿ ಭಾಗದಲ್ಲಿ ಹೆಚ್ಚು ಕ್ಲಿನಿಕ್​ಗಳನ್ನು ತೆರೆದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಈ ಮೂಲಕ ಗೂಗಲ್‌ ಚಿಕಿತ್ಸೆ ನೀಡಿ ಜನರ ಪ್ರಾಣಕ್ಕೆ ಅಪಾಯ ತರುತ್ತಿದ್ದಾರೆ. ಹೀಗಾಗಿ ನಕಲಿ ಕ್ಲಿನಿಕ್‌ ಗಳನ್ನು ಲಾಕ್‌ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಕುರಿತು ಮತ್ತಷಟು ತನಿಖೆ ನಡೆಯುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು