ಹುಬ್ಬಳ್ಳಿ: ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದ್ದು, ಸಮೀರ್ ಎಂಬಾತನಿಂದ ಹಿಂದೂ ಯುವತಿಗೆ ಲವ್ ಜಿಹಾದ್ ಬಲೆಗೆ ಬಿದಿದ್ದು, ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆ ಎದುರು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಜಮಾಯಿಸಿದರು.
ಗಾಂಜಾ ವ್ಯಸನಿಯಾಗಿರೋ ಸಮೀರ್ ನ ಬಂಧನಕ್ಕೆ ಆಗ್ರಹಿಸಿದ್ದಾರೆ. ಸಮೀರ್ ನ ಮೊಬೈಲ್ನನ್ನು ಹಿಂದೂ ಪರ ಸಂಘಟನೆ ಕಾರ್ಯಕರ್ತರು ವಶಕ್ಕೆ ಪಡೆದಿದ್ದಾರೆ. ಮೊಬೈಲ್ ನಲ್ಲಿ ಸಿಕ್ಕ ಗಾಂಜಾ, ಮಾದಕ ವಸ್ತುಗಳ ಸೇವನೆ ಫೋಟೋ, ವಿಡಿಯೋ ಸಿಕ್ಕಿದ್ದು, ಇಷ್ಟೆಲ್ಲಾ ಪರೇಡ್ ನಡೆಸಿದ್ರು ಗಾಂಜಾ ಹೇಗೆ ಬಂತು ಎಂಬುದು ಕಾರ್ಯಕರ್ತರ ಪ್ರಶ್ನೆಯಾಗಿದೆ.
ಅಷ್ಟೇ ಅಲ್ಲದೆ ಹಿಂದೂ ಹುಡಿಗಿಯರಿಗೆ ಗಾಂಜಾ ಅಭ್ಯಾಸ ಮಾಡ್ತಾ ಇರೋ ಆರೋಪ ಕೇಳಿಬಂದಿದೆ. ಗಾಂಜಾ ವ್ಯಸನ ಮಾಡಿಸಿ ಅವರೊಂದಿಗೆ ಅಸಭ್ಯ ವರ್ತನೆ ಆರೋಪ ಬಂದಿದ್ದು, ಇದರಿಂದಾಗಿ ಆತನನ್ನ ಬಂಧಿಸುವಂತೆ ಠಾಣೆ ಎದುರು ಪ್ರತಿಭಟನೆ ನಡೆಸಲಾಗಿದೆ.

