ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಸೆಂಟರ್ ಫಾರ್ ಅಡ್ವಾನ್ಸ್ ಲರ್ನಿಂಗ್‌ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, ಸಂಸ್ಥೆಯ ಶೇ.100ರಷ್ಟು ಫಲಿತಾಂಶ ಪಡೆದಿದೆ.

ಸಿಎಫ್‌ಎಎಲ್‌ನಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲ 282 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಅವರಲ್ಲಿ 238 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 8 ವಿದ್ಯಾರ್ಥಿಗಳು 590ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಅತ್ಯುತ್ತಮ ಫಲಿತಾಂಶವಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಡಾ. ಸ್ಥಿತಾ ಹೆಗ್ಡೆ ತಿಳಿಸಿದರು.

ಸಂಸ್ಥೆಯ ವಿದ್ಯಾರ್ಥಿನಿಯರಾದ ಕಾರ್ಡೋಝಾ (599) ಪ್ರಥಮ ಮತ್ತು ಮೀನಾಕ್ಷಿ ಉಣ್ಣಿತ್ತಾನ್ (598) ಅವರು ದ್ವಿತೀಯ ರ್ಯಾಂಕ್ ಪಡೆದುಸಿಎಫ್ ಎಎಲ್ ಹಾಗೂಮಂಗಳೂರಿಗೆ ಕೀರ್ತಿ ತಂದಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಟ್ರಸ್ಟಿ ವಿಜಯ್ ಮೋರಸ್ ಮಾತನಾಡಿ, ಸಿಎಫ್‌ಎಎಲ್‌ನಲ್ಲಿ ಜೆಇಇ, ನೀಟ್, ಕೆಸಿಇಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಅಗತ್ಯವನ್ನು ಒಗ್ಗೂಡಿಸಿ ಬೋಧನೆ ಮಾಡಲಾಗುತ್ತಿದೆ. ನಿರಂತರ ಸಮಸ್ಯಾ ಪರಿಹಾರ ಅಭ್ಯಾಸ ಮತ್ತು ಶಿಸ್ತಿನ ಶಿಕ್ಷಣ ನೀಡಲಾಗುತ್ತಿದೆ. ಸಿಎಫ್ಎಎಲ್ ನಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಮಾತ್ರವಲ್ಲ ಜೀವನ ಕೌಶಲವನ್ನೂ ಕಲಿಯುತ್ತಾರೆ ಎಂದರು. ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಸಿಎಫ್‌ಎಎಲ್ ಆಕಾಶಭವನ ಕ್ಯಾಂಪಸ್‌ನಲ್ಲಿ ಅಭಿನಂದಿಸಲಾಯಿತು.

View this post on Instagram

A post shared by News Karnataka (@newskarnataka)