ಧಾರವಾಡ: ಮುಸ್ಲಿಂ ಜಿಮ್ ಟ್ರೈನರ್ ನಿಂದ ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅನುಚಿತ ವರ್ತನೆ ಆರೋಪ ಕೇಳಿಬಂದಿದೆ. ಧಾರವಾಡದ ಫಿಟ್ನೆಸ್ ಫಸ್ಟ್ ಜಿಮ್ ನಲ್ಲಿ ಟ್ರೈನರ್ ಎಂಬ ಮಾಹಿತಿ ತಿಳಿದು ಬಂದಿದೆ.

ಜಿಮ್ ಟ್ರೈನರ್ ಸಾಬಿರ್ ಎಂಬಾತನಿಂದ ನಿರಂತರ ಅಸಭ್ಯ ವರ್ತನೆ ನಡೆಯುತ್ತಿದೆ. ಹಿಂದೂ ಯುವತಿಯರನ್ನೇ ಸಾಬಿರ್ ಟಾರ್ಗೆಟ್ ಮಾಡುತ್ತಿದ್ದರು. ಅವರ ಬಾತ್ರೂಮ್ ಗೆ ಹೋಗಿ ಸಾಬಿರ್ ಬರ್ತಿದ್ದ.
ಟ್ರೈನಿಂಗ್ ವೇಳೆ ಬೇಕಂತಲೇ ಮೈ ಕೈ ಮುಟ್ಟಿ ಅನುಚಿತ ವರ್ತನೆ ತೋರುತ್ತಿದ್ದನು.

ಹಿಂದೂ ಯುವತಿಯರನ್ನ ಬ್ಯಾಡ್ ಟಚ್ ಮೂಲಕ ಅಸಭ್ಯ ವರ್ತನೆ ಮಾಡುತ್ತಿದ್ದು, ಸದ್ಯ ಧಾರವಾಡದ ಮರಾಠ ಕಾಲೋನಿಯಲ್ಲಿರುವ ಜಿಮ್ ಗೆ ಬಜರಂಗದಳ ಬೀಗ ಜಡಿದಿದೆ. ಈಗಾಗಲೇ ಕಾರ್ಯಕರ್ತರು ವಾರ್ನ್ ಮಾಡಿದ್ದರು. ಆದರೂ ಸಹ ತನ್ನ ಬುದ್ಧಿಯನ್ನ ಸಾಬಿರ್ ಮುಂದುವರೆಸಿದ್ದರು. ಸದ್ಯ ಜಿಮ್ ಗೆ ಬೀಗ ಜಡಿದು ಸಾಬಿರ್ ಬರುವಂತೆ ಕಾರ್ಯಕರ್ತರ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿಪರಿಶೀಲನೆ ನಡೆಸಿದ್ದಾರೆ.

View this post on Instagram

A post shared by News Karnataka (@newskarnataka)