ಗೋವಾ: ಮೂಲತಃ ಗುಜರಾತ್‌ನವರಾದ ಆರತಿ, ಈಗ ಗೋವಾದ ಕಡಲತೀರದಲ್ಲಿ ಸಣ್ಣಪುಟ್ಟ ವಸ್ತುಗಳನ್ನು ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ. 13ನೇ ವಯಸ್ಸಿನಲ್ಲೇ ಕೆಲಸಕ್ಕೆ ಇಳಿದ ಇವರು, ಶಾಲೆಗೆ ಹೋಗಿದ್ದು ಕೇವಲ 4ನೇ ತರಗತಿಯವರೆಗೆ ಮಾತ್ರ.
ಆದರೆ, ಇಂದು ಇವರು ಇಂಗ್ಲಿಷ್, ಹಿಂದಿ, ಗುಜರಾತಿ ಮಾತ್ರವಲ್ಲದೆ ಫ್ರೆಂಚ್, ರಷ್ಯನ್, ಇಟಾಲಿಯನ್ ಮತ್ತು ಸ್ಪ್ಯಾನಿಷ್ ಸೇರಿದಂತೆ ಒಟ್ಟು 7 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.
ವಿದೇಶಿ ಪ್ರವಾಸಿಗರ ಜೊತೆ ವ್ಯವಹರಿಸುತ್ತಲೇ ಈ ಭಾಷೆಗಳನ್ನು ಕಲಿತಿರುವ ಇವರ ಏಕೈಕ ಕನಸು ತಮ್ಮ 8 ಜನರ ಕುಟುಂಬಕ್ಕೆ ಒಂದು ಸ್ವಂತ ಮನೆ ಕಟ್ಟಿಸುವುದು. ಆರತಿ ಅವರ ಈ ಅದಮ್ಯ ಚೇತನ ಮತ್ತು ಆತ್ಮವಿಶ್ವಾಸದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ.

